ನಾಪೆÇೀಕ್ಲು, ಡಿ. 2: ಮಡಿಕೇರಿ ತಾಲೂಕಿನ ದೊಡ್ಡ ಪಟ್ಟಣ ನಾಪೆÇೀಕ್ಲುವಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಭಾಗ್ಯ ಲಭಿಸಿದೆ. ಅದರೊಂದಿಗೆ ನಾಪೆÇೀಕ್ಲು ಪದವಿ ಪೂರ್ವ ಕಾಲೇಜು ಎಂಬ ಹೆಸರಿನ ಬದಲಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ನಾಮಕರಣವಾಗಿದೆ. ಅದೇ ರೀತಿ ಪೊನ್ನಂಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಈ ಶಾಲಾ ಚಟುವಟಿಕೆ ಜಾರಿಗೊಂಡಿದೆ.

ರಾಜ್ಯ ಸರಕಾರ ರಾಜ್ಯದ 176 ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲು ಸಮಗ್ರ ಶಾಲಾಭಿವೃದ್ಧಿ ಯೋಜನೆಯ ಮಾರ್ಗ ಸೂಚಿ ಹೊರಡಿಸಿದ್ದು, ಕೊಡಗಿನ ನಾಪೆÇೀಕ್ಲುವಿನೊಂದಿಗೆ ಪೆÇನ್ನಂಪೇಟೆ ಮತ್ತು ಸೋಮವಾರಪೇಟೆಯಲ್ಲಿಯೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾರ್ಯ ಆರಂಭಿಸಲಿದೆ.ಕೊಡಗಿನ ಮೂರು ತಾಲೂಕುಗಳಿಗೆ ತಲಾ ಒಂದರಂತೆ ಈ ಶೈಕ್ಷಣಿಕ ಕ್ರಮ ರೂಪಿಸಲಾಗಿದೆ.

ಸರಕಾರಿ ಶಾಲೆಗಳ ಗುಣಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ 1ರಿಂದ 12ನೇ ತರಗತಿಗಳನ್ನು ಒಳಗೊಂಡ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲು ರಾಜ್ಯದ ಆಯವ್ಯಯದಲ್ಲಿ ಘೋಷಣೆಯಾಗಿದ್ದು, ಉಲ್ಲೇಖಿತ ಸರಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.

ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಮುಖ ಉದ್ದೇಶವು ಕನಿಷ್ಠ ಶೇ. 75ರಷ್ಟು ವಿದ್ಯಾರ್ಥಿಗಳು ನಿಗದಿತ ಕಲಿಕಾ ಸಾಮಥ್ರ್ಯವನ್ನು ಹೊಂದಿರುವುದು ಮತ್ತು ಉಳಿದ ವಿದ್ಯಾರ್ಥಿಗಳೂ ನಿಗದಿಪಡಿಸಿದ ಕಲಿಕಾ ಸಾಮಥ್ರ್ಯಗಳಲ್ಲಿ ಕನಿಷ್ಠ ಶೇ. 50ರಷ್ಟು ಸಾಧನೆಗೊಳಿಸುವದಾಗಿದೆ. ಇದರ ಜೊತೆಗೆ ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಮೌಲ್ಯ ವಿಶ್ವಾಸಾರ್ಹತೆ ಮಾಪನ ಮಾಡಲು ವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ.

ಕಲಿಕಾ ಬೋಧನಾ ಸಂಪನ್ಮೂಲ, ಗುಣಮಟ್ಟವನ್ನು ಉತ್ತಮೀಕರಿಸುವ ಕ್ರಮಗಳು, ಆಡಳಿತಾತ್ಮಕ ಕ್ರಮಗಳು, ಭೌತಿಕ ಸೌಲಭ್ಯ ಮತ್ತು ನಿರ್ವಹಣೆ, ಆಯವ್ಯಯದ ಲಭ್ಯತೆ ಇತ್ಯಾದಿಗಳ ಕುರಿತು ಉಲ್ಲೇಖಿತ ಸರಕಾರದ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಪೂರ್ಣ ಜವಾಬ್ದಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಿಗೆ ಇರಲಿದೆ. ಇದರಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಕ್ರಮಗಳು, ಮಕ್ಕಳ ದಾಖಲಾತಿ, ಶಾಲಾ ಪೂರ್ವ ಶಿಕ್ಷಣದ ಅವಕಾಶ, ನಲಿಕಲಿ ಪದ್ಧತಿಯ ಪರಿಣಾಮಕಾರಿ ಅನುಷ್ಠಾನ, ಮೂಲ ಸಾಕ್ಷರತೆ ಹಾಗೂ ಗಣಿತದ ಮೂಲ ಕ್ರಿಯಗಳ ಕಲಿಕೆ, ತರಗತಿ ಅನುಗುಣವಾದ ಸಾಮಥ್ರ್ಯಗಳ ಕಲಿಕೆ, ಇಂಗ್ಲೀಷ್ ಮತ್ತು ಗಣಿತ ವಿಷಯಗಳ ಕಲಿಕೆಗೆ ಒತ್ತು ನೀಡುವಿಕೆ, ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆ, ಕ್ರೀಡೆ ಮತ್ತು ದೈಹಿಕ ಶಿಕ್ಷಣ, ಪಠ್ಯ ಪೂರಕ ಚಟುವಟಿಕೆಗಳು, ಪಬ್ಲಿಕ್ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸುವ ಕ್ರಮಗಳು, ಶಿಕ್ಷಕರ ವೃತ್ತಿಪರ ಅಭಿವೃದ್ಧಿ, ಬೋಧನೆ - ಕಲಿಕೆಯ ಪ್ರಕ್ರಿಯೆ ಮತ್ತು ಬೋಧನಾ ಪದ್ಧತಿ, ಕಲಿಕಾ ಸಮಯ, ಗುಣಮಟ್ಟದ ಕಲಿಕಾ ಪರಿಸರ ಮತ್ತು ಮೂಲಭೂತ ಸೌಲಭ್ಯಗಳು, ಸುರಕ್ಷತೆ ಆರೋಗ್ಯ ಮತ್ತು ನೈರ್ಮಲ್ಯ, ವಿಶೇಷ ಮಕ್ಕಳಿಗೆ ಒತ್ತಾಸೆ, ಸಂಸ್ಥೆಯ ಆಡಳಿತ, ಪೆÇೀಷಕರು, ಶಾಲಾ ಸಮಿತಿ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ, ಸಿಬ್ಬಂದಿ ವೇತನ ಮತ್ತು ಹಣಕಾಸಿನ ವ್ಯವಹಾರ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಮಾಹಿತಿಯಂತೆ ನಿರ್ಧಿಷ್ಟ ಕಾರ್ಯಯೋಜನೆ ಅನುಷ್ಠಾನಗೊಳ್ಳುವದರ ಮೂಲಕ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲಭೂತ ಸೌಲಭ್ಯದೊಂದಿಗೆ ಉತ್ತಮ ಶಿಕ್ಷಣ ಲಭ್ಯವಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಶಿಕ್ಷಣ ಸಂಸ್ಥೆಯ ಮೇಲಾಧಿಕಾರಿಗಳು ಸಕಲ ಸಿದ್ಧತೆಯನ್ನು ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದೆ.

-ಪಿ.ವಿ.ಪ್ರಭಾಕರ್