ನಾಪೆÉÇೀಕ್ಲು, ಡಿ. 2: ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಈವರೆಗೆ ಇದ್ದ ಸಂಚಾರಿ ಪಡಿತರ ವ್ಯವಸ್ಥೆಯನ್ನು ಕಳೆದ ಎರಡು ತಿಂಗಳಿಂದ ಸ್ಥಗಿತಗೊಳಿಸಿದ್ದು, ಈ ವಿಭಾಗದ ಸುಮಾರು 500 ಕ್ಕೂ ಅಧಿಕ ಬಡಜನರು, ಕೂಲಿ ಕಾರ್ಮಿಕರು ಪಡಿತರಕ್ಕಾಗಿ ಭಾಗಮಂಡಲಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಯ್ಯಂಗೇರಿಯಲ್ಲಿ ಪಡಿತರ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಎಸ್.ಡಿ.ಪಿ.ಐ. ಅಯ್ಯಂಗೇರಿ ಘಟಕದ ಅಧ್ಯಕ್ಷ ಪಿ.ಎಂ. ಉಸ್ಮಾನ್, ಉಪಾಧ್ಯಕ್ಷ ಮುನೀರ್ ಮತ್ತು ವೀರಾಜಪೇಟೆ ತಾಲೂಕಿನ ಎಸ್.ಡಿ.ಪಿ.ಐ. ಉಪಾಧ್ಯಕ್ಷ ಕೆ.ವೈ. ಅಶ್ರಫ್ ಆಗ್ರಹಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಅಯ್ಯಂಗೇರಿ ಗ್ರಾಮಕ್ಕೆ ಸಂಚಾರಿ ಪಡಿತರ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದರಿಂದ ಈ ವಿಭಾಗದ ಜನರಿಗೆ ಬಹಳ ಅನುಕೂಲವಾಗಿತ್ತು. ಆದರೆ ಈಗ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ರುವದರಿಂದ ಈ ವಿಭಾಗದ 500-600 ಕುಟುಂಬಗಳು ಪಡಿತರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಆದುದರಿಂದ ನಾಗರಿಕ ಮತ್ತು ಆಹಾರ ಸರಬರಾಜು ಇಲಾಖಾಧಿ ಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಂಚಾರಿ ಪಡಿತರ ವಿತರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.