ಗೋಣಿಕೊಪ್ಪ ವರದಿ, ಡಿ. 2 :ಪೆÇನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಆರಂಭಗೊಂಡ ಮಂಡೇಪಂಡ ಸುಬ್ರಮಣಿ ಮೆಮೋರಿಯಲ್ ಪ್ರಾಥಮಿಕ ಶಾಲಾ ವಿಭಾಗದ ಬಾಲಕ-ಬಾಲಕಿಯರ ಹಾಕಿ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಗೆಲುವಿನ ನಗೆ ಬೀರಿದ್ದು, 2 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

ಬಾಲಕಿಯರ ವಿಭಾಗ : ಬಾಲಕಿಯರಲ್ಲಿ ಪೊನ್ನಂಪೇಟೆ ಸರ್ಕಾರಿ ಶಾಲಾ ತಂಡವು ಭಾರತೀಯ ಕೊಡಗು ವಿದ್ಯಾಲಯ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಪೊನ್ನಂಪೇಟೆ ಪರ 25 ನೇ ನಿಮಿಷದಲ್ಲಿ ಸೌಮ್ಯ, 27 ರಲ್ಲಿ ತುಷಾರಾ ಗೋಲು ಹೊಡೆದರು.

ಚಿನ್ಮಯ ತಂಡವು ಲಯನ್ಸ್ ತಂಡದ ವಿರುದ್ದ 3-1 ಗೋಲುಗಳಿಂದ ಗೆಲುವು ದಾಖಲಿಸಿತು. ಚಿನ್ಮಯ ಪರ 4, 10 ಹಾಗೂ 20 ನೇ ನಿಮಿಷಗಳಲ್ಲಿ ಕವನ 3 ಗೋಲು, ಲಯನ್ಸ್ ಪರ 6 ರಲ್ಲಿ ಶೃದ್ಧಾ 1 ಗೋಲು ಹೊಡೆದರು.

ಬಾಲಕರ ವಿಭಾಗ : ಬಾಲಕ ವಿಭಾಗದಲ್ಲಿ ಲಯನ್ಸ್ ತಂಡವು ರಾಮಟ್ರಸ್ಟ್ ತಂಡದ ವಿರುದ್ದ 6-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. ಲಯನ್ಸ್ ಪರವಾಗಿ 17, 20, 23, 25 ನೇ ನಿಮಿಷಗಳಲ್ಲಿ ಧನುಶ್ ಹ್ಯಾಟ್ರಿಕ್ ಸೇರಿ 4 ಗೋಲು ಸಿಡಿಸಿದರು. 4 ರಲ್ಲಿ ಶಿವಾಂತ್, 26 ರಲ್ಲಿ ಯಶಸ್ ತಲಾ ಒಂದೊಂದು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು. ಲಯನ್ಸ್ ತಂಡವು ಸೆಂಟ್ ಆನ್ಸ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಲಯನ್ಸ್ ಪರವಾಗಿ 9 ರಲ್ಲಿ ವರುಣ್, 38 ರಲ್ಲಿ ರಜತ್ ತಲಾ ಒಂದೊಂದು ಗೋಲು ಹೊಡೆದರು.

ರಾಮಟ್ರಸ್ಟ್ ತಂಡವು ಸೆಂಟ್ ಆನ್ಸ್ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ರಾಮಟ್ರಸ್ಟ್ ಪರ 14 ರಲ್ಲಿ ಮುತ್ತಣ್ಣ, 22 ರಲ್ಲಿ ನಾಚಪ್ಪ, 24 ರಲ್ಲಿ ನಿರೂಪ್, ಆನ್ಸ್ ಪರ 7 ರಲ್ಲಿ ಅನುಶ್ ತಲಾ ಒಂದೊಂದು ಗೋಲು ಹೊಡೆದರು.

ಜಿಎಸ್‍ಪಿ ಹಾಗೂ ಸೆಂಟ್ ಆಂಥೋನಿ ತಂಡಗಳ ನಡುವಿನ ಪಂದ್ಯ 1-1 ರಲ್ಲಿ ಡ್ರಾ ಆಯಿತು. ಜಿಎಸ್‍ಪಿ ಪರ 17 ರಲ್ಲಿ ಕೌಶಿಕ್, ಆಂಥೋನಿ ಪರ 14 ರಲ್ಲಿ ನಂಜಪ್ಪ ತಲಾ ಒಂದೊಂದು ಗೋಲು ಹೊಡೆದರು. ಅಂಕುರ್ ತಂಡವು ಸೆಂಟ್ ಆಂಥೋನಿ ತಂಡಗಳ ಪಂದ್ಯ 1-1 ರಲ್ಲಿ ಡ್ರಾದಲ್ಲಿ ಅಂತ್ಯವಾಯಿತು. ಅಂಕುರ್ ಪರ 26 ರಲ್ಲಿ ಮಿಥುನ್, ಆಂಥೋನಿ ಪರ 12 ರಲ್ಲಿ ಪುನಿತ್ ಒಂದೊಂದು ಗೋಲು ಬಾರಿಸಿದರು.