ಮಡಿಕೇರಿ, ಡಿ. 2: ನಗರದ ಫ್ಯೂಚರ್ ಪಾಯಿಂಟ್ ಕಂಪ್ಯೂಟರ್ ಸಂಸ್ಥೆಯ ವತಿಯಿಂದ ನಗರದ ಬಾಲಭವನ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸಿಹಿ ನೀಡುವ ಮೂಲಕ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕಿ ಸುನಿತ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಕುರಿತು ಮಾಹಿತಿ ನೀಡಿದರು. ನಂತರ ತಮ್ಮ ಸಂಸ್ಥೆಯ ವತಿಯಿಂದ ಬಾಲಭವನದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುವದು. ಆದ್ದರಿಂದ ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಈ ಸಂದರ್ಭ ಸಂಸ್ಥೆಯ ಕಂಪ್ಯೂಟರ್ ಶಿಕ್ಷಕಿ ಡಿಂಪಲ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.