ಮಡಿಕೇರಿ, ಡಿ. 2: ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೊಡಗು ಮೂಲದ ಇಬ್ಬರು ಯುವಕರನ್ನು ಮಲಪುರಂ ಜಿಲ್ಲೆಯ ಕುಟ್ಟಿಪುರದ ಅಬಕಾರಿ ಪೊಲೀಸರು ನಿನ್ನೆ ದಿನ ಬಂಧಿಸಿದ್ದಾರೆ.ಮೂಲತಃ ವೀರಾಜಪೇಟೆ ವ್ಯಾಪ್ತಿಯ ಮಾಯಮುಡಿ ಮಡಿಕೆಬೀಡುವಿನ ಅಜೀಜ್ ಹಾಗೂ ಕೋಣನಕಟ್ಟೆ ರುದ್ರಬೀಡುವಿನ ಜುನೈದ್ ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಈ ಯುವಕರನ್ನು ನಿನ್ನೆ ಬೆಳಿಗ್ಗೆ ನೈಟ್ರಸಿಂ 10mg ಎಂಬ 930 ಮಾದಕ ಮಾತ್ರೆಗಳೊಂದಿಗೆ ಕುಟ್ಟಿಪುರದಲ್ಲಿ ಬಂಧಿಸಲಾಗಿದೆ. ಹೊಸ ವರ್ಷಾಚರಣೆ ಸಂಬಂಧ ನಡೆಯುವ ರೇವ್ ಪಾರ್ಟಿಗಳಲ್ಲಿ ಮಾರಾಟ ಮಾಡುವದಕ್ಕಾಗಿ ಬೆಂಗಳೂರಿನಿಂದ ಸೇಲಂಗೆ ತೆರಳಿ ಅಲ್ಲಿಂದ ಪಾಲಕ್ಕಾಡ್ ಮೂಲಕ ಕುಟ್ಟಿಪುರಕ್ಕೆ ಬಂದು ತ್ರಿಶೂರಿಗೆ ತೆರಳುವ ಪ್ರಯತ್ನದಲ್ಲಿದ್ದಾಗ ಈ ಇಬ್ಬರು ಯುವಕರನ್ನು ಮಾಲು ಸಹಿತ ಕುಟ್ಟಿಪುರ ಅಬಕಾರಿ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ನಿದ್ರಾ ಹೀನತೆ ಸೇರಿದಂತೆ ಕೆಲವೊಂದು ವ್ಯಾಧಿಗಳಿಗೆ ನೀಡುವ ಮಾತ್ರೆ ಇದಾಗಿದ್ದು, ಇದನ್ನು ವೈದ್ಯರ ಸೂಚನೆ ಇಲ್ಲದೆ ಬಳಸುವಂತಿಲ್ಲ.(ಮೊದಲ ಪುಟದಿಂದ) ಮಾತ್ರವಲ್ಲದೆ ಅಗತ್ಯಕ್ಕಿಂತ ಹೆಚ್ಚಾಗಿ ಇಟ್ಟುಕೊಳ್ಳುವದು ಅಪರಾಧ ವೆನ್ನಲಾಗಿದೆ.ಇಂತಹ ಮಾತ್ರೆಗಳನ್ನು ಅನಧಿಕೃತವಾಗಿ ತಂದಿದ್ದ ಯುವಕ ರನ್ನು ಕುಟ್ಟಿಪುರ ಪೊಲೀಸರು ಸೆರೆ ಹಿಡಿದು ವಿಚಾ ರಣೆಗೆ ಒಳಪಡಿಸಿ ದಾಗ ಮಾರಾಟ ಮಾಡಲು ತಂದಿರುವ ಬಗ್ಗೆ ಯುವಕರು ಒಪ್ಪಿಕೊಂಡಿದ್ದಾರೆ ಎಂದು ‘ಶಕ್ತಿ’ ಗೆ ಮೂಲಗಳಿಂದ ತಿಳಿದು ಬಂದಿದೆ. ತ್ರಿಶೂರು, ಎರ್ನಾಕುಳಂ ವ್ಯಾಪ್ತಿಯಲ್ಲಿ ಮಾತ್ರೆಗಳನ್ನು ಮಾರಾಟ ಮಾಡಲು ಆರೋಪಿಗಳು ತೀರ್ಮಾನಿಸಿ ದ್ದರೆನ್ನಲಾಗಿದ್ದು, 3 ರಿಂದ 5 ಲಕ್ಷ ರೂ. ಮೌಲ್ಯದ ಮಾತ್ರೆಗಳನ್ನು ಯುವಕರು ಹೊಂದಿದ್ದರು. ವಿಚಾರಣೆ ಬಳಿಕ ಆರೋಪಿಗಳಿ ಬ್ಬರನ್ನು ಪೊನ್ನಾಣಿಯ ಸಬ್‍ಜೈಲ್‍ಗೆ ಕಳುಹಿಸಲಾಗಿದೆ. - ಉಜ್ವಲ್