ಗೋಣಿಕೊಪ್ಪ, ಡಿ. 3: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯ 29 ವಿದ್ಯಾರ್ಥಿಗಳು ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ನಡೆದ 17ನೇ ರಾಷ್ಟ್ರಮಟ್ಟದ ‘ಒಕಿನೋವ ಕರಾಟೆ ಶೋರಿನ್ ಕೈ’ ಚಾಂಪಿಯನ್ ಷಿಪ್‍ನಲ್ಲಿ ಭಾಗವಹಿಸಿ 10 ಚಿನ್ನ, 10 ಬೆಳ್ಳಿ ಹಾಗೂ 26 ಕಂಚಿನ ಪದಕಗಳನ್ನು ಪಡೆದು ಶಾಲೆಗೆ ಕೀರ್ತಿತಂದಿದ್ದಾರೆ. ರಿಶಾ ನಾಣಯ್ಯ 2 ಚಿನ್ನ, ಉತ್ತಪ್ಪ, ಲಿತೇಶ್, ರಿವಿನ್, ರಂಜಿತ್, ಗಗನ್ ದೀಪ್‍ಆರಾಧ್ಯ, ಚಿಣ್ಣಪ್ಪ, ಪೂಜ ಹಾಗೂ ಮೋನಿಕ ಚಿನ್ನದ ಪದಕ ಪಡೆದಿರುತ್ತಾರೆ.
ಭಾರದಗುಂಡು ಎಸೆತದಲ್ಲಿ
ನ್ಯಾಷನಲ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳಾದ ಆಕಾಶ್ ಬಿ.ಜಿ. ಹಾಗೂ ಷಾಷಿಮ್ ಸುಲ್ತಾನ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಸಿಬಿಎಸ್‍ಇ ಶಾಲೆಗಳ ಕ್ಲಸ್ಟರ್ ‘ಬ್ರಹ್ಮಗಿರಿ ಸಹೋದಯ’ದ ಅಡಿಯಲ್ಲಿ ಇತ್ತೀಚೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ.