ಮಡಿಕೇರಿ, ಡಿ. 2: ಕಳೆದ 28 ವರ್ಷಗಳಿಂದ ಕೊಡವ ನಾಡು, ನುಡಿ, ಸಂಸ್ಕøತಿಗಾಗಿ ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿರುವ ಕೊಡವ ನ್ಯಾಷನಲ್ ಕೌನ್ಸಿಲ್‍ನ ಹೋರಾಟಕ್ಕೆ ಕೆಲ ಕುತಂತ್ರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೊಡವರ ಬದುಕಿನಲ್ಲಿ ದೇವಟಿಪರಂಬು ಹತ್ಯಾಕಾಂಡ ಎಂದೂ ಮರೆಯಲಾಗದ ಕಹಿ ಘಟನೆ. ಈ ನೋವಿನೊಂದಿಗೆ ಸರಕಾರ ಟಿಪ್ಪು ಜಯಂತಿ ಆಚರಿಸಿ ಕೊಡವರಿಗೆ ಮತ್ತಷ್ಟು ನೋವುಂಟು ಮಾಡುತ್ತಿರುವದು ವಿಷಾದÀನೀಯ ಎಂದರು.ಸಿಎನ್‍ಸಿ ಹೋರಾಟದಿಂದ ಕೊಡವರ ಕುಲಶಾಸ್ತ್ರ ಅಧ್ಯಯನ ಕಾರ್ಯ ಆರಂಭವಾಯಿತು. ಆದರೆ ಕೆಲವು ದುಷ್ಟ ಮನಸ್ಸುಗಳಿಂದ ಇದನ್ನು ಕೂಡ ಸ್ಥಗಿತಗೊಳಿಸಲಾಯಿತು ಎಂದು ಬೇಸರ ವ್ಯಕ್ತ ಪಡಿಸಿದರು.

ಕೊಡಗಿನ ಪ್ರಕೃತಿ ವಿಕೋಪಕ್ಕೆ ಸ್ಪಂದನೆ ದೊರೆತು ಎಲ್ಲೆಡೆಯಿಂದ ಕೊಡಗಿಗೆ ಹಣದ

(ಮೊದಲ ಪುಟದಿಂದ) ನೆರವು ಬಂದಿದೆ. ಆದರೆ ಇಂದಿಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರಕಿಲ್ಲ. ಈ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ನಾಚಪ್ಪ, ಸರಕಾರಕ್ಕೆ ಬಂದ ಹಣದ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸ ಬೇಕು ಎಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಚಂಡೀರ ರಾಜ, ಕರವಂಡ ಸರಸ್ವತಿ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಹಂಚೆಟ್ಟೀರ ನಯನ್, ಅರೆಯಡ ಸವಿತಾ ಮತ್ತಿತರರು ಇದ್ದರು. ನಂದಿನೆರವಂಡ ದಿಶಾ ಪ್ರಾರ್ಥಿಸಿ, ಕಲಿಯಂಡ ಪ್ರಕಾಶ್ ಸ್ವಾಗತಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಕೊಡವ ನ್ಯಾಷನಲ್ ಕೌನ್ಸಿಲ್ ಪದಾಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದರು. ಅಧ್ಯಕ್ಷ ನಾಚಪ್ಪ ಬಾಳೆ ಕಡಿದರು. ತ್ರಿವರ್ಣ ರಾಷ್ಟ್ರ ದ್ವಜವನ್ನು ಮತ್ತು ಕೊಡವ ಲ್ಯಾಂಡ್ ದ್ವಜವನ್ನು ಏಕ ಕಾಲದಲ್ಲಿ ಆರೋಹಣ ಮಾಡಲಾಯಿತು. ನಿರ್ಣಯವನ್ನು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ಮಂಡಿಸಿದರು. ಸಭೆಯಲ್ಲಿ ನಿರ್ಣಯಗಳು ಅವಿರೋಧವಾಗಿ ಅಂಗೀಕರಿಸಲ್ಪಟ್ಟಿತು.

ನಿರ್ಣಯಗಳು: 6ನೇ ಶೆಡ್ಯೂಲ್ ಪ್ರಕಾರ ಕೊಡವ ಲ್ಯಾಂಡ್ ಸ್ವಾಯತ್ತತೆ ರಚನೆಯಾಗಬೇಕು. ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು. ವಾಯವ್ಯ ಕೊಡಗಿನ ಜಲ-ಸ್ಫೋಟ ಭೂ-ಸ್ಫೋಟ ಉಂಟಾದ 7 ನಾಡುಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಬೇಕು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಂಯೋಜನೆ ಗೊಂಡ ವಿಪತ್ತು ನಿರ್ವಹಣಾ ಮಂತ್ರಿಗಳ ನೇಮಕವಾಗ ಬೇಕು. ವಿಪತ್ತಿಗೆ ಮೂಲ ಕಾರಣವಾದ ಹಾರಂಗಿ ಜಲಾಶಯ ವನ್ನು ತುರ್ತಾಗಿ ಕೆಡವಬೇಕು.

ಕೊಡವರ ಪ್ರಧಾನ ಭೂ-ರಾಜಕೀಯ ಲ್ಯಾಂಡ್ ಸ್ವಾಯತ್ತತೆ ಅನ್ವೇಷಣೆ, ಕೇಂದ್ರಾಡಳಿತ ಪ್ರದೇಶ ಹಕ್ಕೊತ್ತಾಯ ಸೇರಿದಂತೆ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342 ರ ವಿಧಿಯಂತೆ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು.

ಅತಿ ಸೂಕ್ಷ್ಮಾತಿ ಸೂಕ್ಷ್ಮ ಜನಾಂಗೀಯ ಅಲ್ಪ ಸಂಖ್ಯಾತ ಸಾಂಸ್ಕøತಿಕ ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿಸಬೇಕು.