ಗೋಣಿಕೊಪ್ಪ ವರದಿ, ಡಿ. 3 : ಹಾಕಿಕೂರ್ಗ್ ವತಿಯಿಂದ ಪೆÇನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಂಡೇಪಂಡ ಸುಬ್ರಮಣಿ ಮೆಮೋರಿಯಲ್ ಪ್ರಾಥಮಿಕ ಶಾಲಾ ವಿಭಾಗದ ಬಾಲಕ-ಬಾಲಕಿಯರ ಹಾಕಿ ಟೂರ್ನಿಯಲ್ಲಿ 5 ತಂಡಗಳು ಗೆಲುವು ದಾಖಲಿಸಿ ಮುನ್ನಡೆ ಪಡೆದುಕೊಂಡವು.

ಬಾಲಕರಲ್ಲಿ ಲಯನ್ಸ್ ಹಾಗೂ ರಾಮಟ್ರಸ್ಟ್, ಬಾಲಕಿಯರಲ್ಲಿ ಚಿನ್ಮಯಿ, ಲಯನ್ಸ್, ಜಿಎಸ್‍ಪಿ ತಂಡಗಳು ಗೆಲುವು ದಾಖಲಿಸಿದವು.

ಬಾಲಕಿಯರಲ್ಲಿ ಲಯನ್ಸ್ ತಂಡವು 1-0 ಗೋಲುಗಳಿಂದ ರೂಟ್ಸ್ ವಿರುದ್ದ ಗೆಲುವು ದಾಖಲಿಸಿತು. ಬಿಜಿಲಿ ಮುತ್ತಮ್ಮ 10 ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲು ಗೆಲವಿನ ದಡ ಸೇರಿಸುವಂತಾಯಿತು.

ಜಿಎಸ್‍ಪಿ ತಂಡವು ಹೆಡ್‍ಸ್ಟಾರ್ ತಂಡವನ್ನು 3-0 ಗೋಲುಗಳಿಂದ ಮಣಿಸಿತು. ಜಿಎಸ್‍ಪಿ ಪರ 14 ನೇ ನಿಮಿಷದಲ್ಲಿ ಕೀರ್ತನಾ, 21 ರಲ್ಲಿ ಪ್ರೀತಿ, 25 ರಲ್ಲಿ ತುಷಾರ್ ತಲಾ ಒಂದೊಂದು ಗೋಲು ಹೊಡೆದು ಗೆಲವಿನ ನಗು ಬೀರಿದರು.

ಚಿನ್ಮಯಿ ತಂಡವು ರೂಟ್ಸ್ ತಂಡದ ವಿರುದ್ದ 3-0 ಗೋಲುಗಳ ಗೆಲವು ಪಡೆಯಿತು. ಚಿನ್ಮಯಿ ಪರವಾಗಿ 6 ಹಾಗೂ 12 ನೇ ನಿಮಿಷ ಗಳಲ್ಲಿ ಶ್ರೇಯ 2 ಗೋಲು, 23 ರಲ್ಲಿ ಆಶಿಕ 1 ಗೋಲು ಹೊಡೆದರು.

ಬಾಲಕರಲ್ಲಿ ಲಯನ್ಸ್ ತಂಡವು ಚಿನ್ಮಯಿ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ಲಯನ್ಸ್ ಪರ 3 ನೇ ನಿಮಿಷದಲ್ಲಿ ರಜತ್, 13 ರಲ್ಲಿ ಧನುಶ್, 15 ರಲ್ಲಿ ವರುಣ್, 20 ರಲ್ಲಿ ಗೌರವ್ ಗೋಲು ಹೊಡೆದರು.

ರಾಮಟ್ರಸ್ಟ್, ತಂಡವು ಚಿನ್ಮಯಿ ತಂಡವನ್ನು 5-0 ಗೋಲುಗಳಿಂದ ಮಣಿಸಿತು. ರಾಮಟ್ರಸ್ಟ್ ಪರ 26 ಹಾಗೂ 28 ನೇ ನಿಮಿಷಗಳಲ್ಲಿ ನಾಚಪ್ಪ 2 ಗೋಲು ಹೊಡೆದು ಮಿಂಚು ಹರಿಸಿದರು. ಉಳಿದಂತೆ 6 ರಲ್ಲಿ ಮುತ್ತಣ್ಣ, 8 ರಲ್ಲಿ ಇಶಾನ್, 22 ರಲ್ಲಿ ನಿರೂಪ್ ಗೋಲು ಹೊಡೆದರು.

-ಸುದ್ದಿಪುತ್ರ