ವೀರಾಜಪೇಟೆ, ಡಿ. 4: ವಿಶೇಷಚೇತನ ಮಕ್ಕಳಲ್ಲಿಯೂ ಪ್ರತಿಭೆಗಳಿದ್ದು, ಅವರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ವೇದಿಕೆಯನ್ನು ಕಲ್ಪಿಸಿ ಕೊಡುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು

ವಿಶ್ವ ಅಂಗವಿಕಲ ಮಕ್ಕಳ ದಿನಾಚರಣೆ ಅಂಗವಾಗಿ ಕೊಡಗು ಜಿಲ್ಲಾ ಪಂಚಾಯಿತಿ, ಸಮಗ್ರ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವೀರಾಜಪೇಟೆ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ತಾಲೂಕು ಮಟ್ಟದ ವಿಶೇಷಚೇತನ ಮಕ್ಕಳಿಗೆ ಕ್ರೀಡಾ ಸ್ಪರ್ಧೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಚ್ಚಪಂಡ ಮಹೇಶ್ ಮಾತನಾಡಿದರು. ವಿಶೇಷ ಚೇತನರೆಂಬ ಕೀಳರಿಮೆ ಬೇಡ ಇತರ ಮಕ್ಕಳಂತೆ ಅವರನ್ನು ಸಮಾಜದಲ್ಲಿ ಎಲ್ಲರಂತೆ ಸಮಾನತೆಯನ್ನು ಪ್ರೋತ್ಸಾಹಿಸುವ ಮೂಲಕ ಸರಕಾರದಿಂದ ಸಿಗುವಂತ ಸೌಲಭ್ಯಗಳನ್ನು ವಿಶೇಷಚೇತನರಿಗೆ ಆದ್ಯತೆ ಮೇರೆ ನೀಡುವಂತಾಗಬೇಕು. ಅವರಿಗೆ ಪೋಷಕರು ಶಿಕ್ಷಕರು ಹಾಗೂ ನಾಗರಿಕರ ಪ್ರೋತ್ಸಾಹ, ಸಹಕಾರ ಅಗತ್ಯವಾಗಿದ್ದು ಜಿಲ್ಲಾ ಪಂಚಾಯಿತಿ ಮುಖಾಂತರ ವಿಶೇಷಚೇತನ ಮಕ್ಕಳಿಗೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವದಾಗಿ ಹೇಳಿದರು

ಕ್ಷೇತ್ರ ಪ್ರಬಾರ ಶಿಕ್ಷಣಾಧಿಕಾರಿ ಅಂಬುಜ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವರಿಗೆ ಅಗತ್ಯ ಸಾಧನ ಸ¯ಕರಣೆಗಳನ್ನು ನೀಡುವದರೊಂದಿಗೆ ವಿಶೇಷ ಭತ್ಯೆ ಹಾಗೂ ಸಾರಿಗೆ ವೆಚ್ಚವನ್ನು ನೀಡಲಾಗುತ್ತಿದೆ. ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ವಿಶೇಷವಾಗಿ ಉತ್ತೇಜನ ನೀಡುವದಾಗಿ ಹೇಳಿದರು.

ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣದ ಪಿ.ಡಿ. ರತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಪ್ರವೀಣ್ ಇತರರು ಉಪಸ್ಥಿತರಿದ್ದರು.

ತಾಲೂಕಿನ 1 ರಿಂದ 4, 5 ರಿಂದ 7, 8 ರಿಂದ 10ನೇ ತರಗತಿಗಳ ಮೂರು ವಿಭಾಗದಲ್ಲಿ ವಿಶೇಷಚೇತನ ಮಕ್ಕಳಿಗೆ ನಿಂಬೆ ಹಣ್ಣು ಚಮಚ, ಮಡಿಕೆ ಒಡೆಯುವದು, ಸಂಗೀತ ಕುರ್ಚಿ, ಬಕೆಟ್‍ಗೆ ಬಾಲ್ ಹಾಕುವದು ಹಾಗೂ ಕಪ್ಪೆ ಓಟದ ಕ್ರೀಡಾಕೂಟವನ್ನು ಏರ್ಪಡಿಸ ಲಾಗಿತ್ತು. ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಛದ್ಮವೇಷ, ನೃತ್ಯ, ಸಂಗೀತ ಸ್ಪರ್ಧೆಗಳು ಜರುಗಿದವು. ಕಾರ್ಯಕ್ರಮದಲ್ಲಿ 150 ಮಕ್ಕಳು ಅವರ ಪೋಷಕರುಗಳು ಭಾಗವಹಿಸಿದ್ದರು.

ಪರಿಸರ ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ವೇದಿಕೆಯಲ್ಲಿ ವಿಶೇಷ ಸಾಧನೆ ಮಾಡಿದ ವಿಶೇಷಚೇತನರುಗಳಾದ ಕೊಂಡಗೇರಿ ಸ.ಹ.ಪ್ರಾ. ಶಾಲಾ ಸಹ ಶಿಕ್ಷಕಿ ರಾಜೇಶ್ವರಿ, ಗ್ರಾಮೀಣ ಪುನರ್ವಸತಿ ಕೆಲಸಗಾರರಾದ ಗಾಯತ್ರಿ, ವಾಲಿಬಾಲ್ ಕ್ರೀಡಾಪಟು ರಂಷÀದ್, ಸ್ವಯಂಸೇವಕಿ ಮಂಗಳಾ, ದಕ್ಷಾ ಇವರುಗಳಿಗೆ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.