ಸುಂಟಿಕೊಪ್ಪ, ಡಿ. 4: ಭಾರತದ ಎನ್‍ಸಿಸಿ ರಾಯಭಾರಿಯಾಗಿ ಕೊಡಗಿನ ಸುಂಟಿಕೊಪ್ಪದ ಯುವತಿ ಸ್ಪಂದನಾ ಸುರೇಶ್ ಮಾಲ್ಡೀವ್ಸ್‍ಗೆ ತೆರಳಿದ್ದಾರೆ.

ಕಳೆದ ಬಾರಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದು, ಎನ್‍ಸಿಸಿ ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆಯಲ್ಲಿ ಆಯ್ಕೆಯಾಗಿ ಗಮನ ಸಳೆದಿದ್ದರು. ಡಿಸೆಂಬರ್ ತಿಂಗಳಿನಲ್ಲಿ ಮಾಲ್ಡೀವ್ಸ್‍ನಲ್ಲಿ ನಡೆಯಲಿರುವ ಯೂತ್ ಎಕ್ಸ್‍ಚೆಂಜ್ ಪ್ರೋಗ್ರಾಂ(ವೈಯಿಪಿ)ನಲ್ಲಿ ಭಾರತದ 4 ಸದಸ್ಯರ ತಂಡದೊಂದಿಗೆ ಆಯ್ಕೆಯಾದ ಕರ್ನಾಟಕ ಹಾಗೂ ಗೋವಾ ಡೈರೆಕ್ಟರೇಟ್‍ನ ಅಭ್ಯರ್ಥಿಯಾಗಿ ನೇಮಕಗೊಂಡಿರುವ ಸ್ಪಂದನಾ ದೆಹಲಿಯಲ್ಲಿ ತರಬೇತಿ ಪಡೆದು ತಾ. 3 ರಂದು ಮಾಲ್ಡೀವ್ಸ್‍ಗೆ ಪ್ರಯಾಣ ಬೆಳೆಸಿದ್ದಾರೆ.

ಇವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸುಂಟಿಕೊಪ್ಪ ಸಂತ ಮೇರಿ ಶಾಲೆ, ಮಡಿಕೇರಿಯ ಕೊಡಗು ವಿದ್ಯಾಲಯ ಹಾಗೂ ಗೋಣಿಕೊಪ್ಪ ಕಾಪ್ಸ್ ವ್ಯಾಸಂಗ ಮಾಡಿದ್ದು ಪ್ರಸ್ತುತ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಸ್ಪಂದನಾ ಸುರೇಶ್ ಸುಂಟಿಕೊಪ್ಪ ಗುತ್ತಿಗೆದಾರ ಕೆ. ಸುರೇಶ್ ಕುಮಾರ್, ಉಪನ್ಯಾಸಕಿ ಪುಷ್ಪಲತಾ ದಂಪತಿಗಳ ಪುತ್ರಿ.