ಮಡಿಕೇರಿ, ಡಿ.4 : ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‍ರವರು ಪರಿನಿರ್ವಾಣ ಹೊಂದಿದ ತಾ.6ರಂದು ಯಾವದೇ ವಿಜಯೋತ್ಸವಕ್ಕೆ ಜಿಲ್ಲಾಡಳಿತ ಅವಕಾಶವನ್ನು ನೀಡಬಾರದೆಂದು ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಸಂವಿಧಾನವನ್ನು ರಚಿಸುವ ಮೂಲಕ ಶೋಷಿತ ಸಮುದಾಯಗಳ ಸಮಾನತೆಗಾಗಿ ಸಾಕಷ್ಟು ಅವಕಾಶಗಳನ್ನು ಒದಗಿಸಿದ ಮಹಾನ್ ವ್ಯಕ್ತಿ. ಇಂತಹ ವ್ಯಕ್ತಿ ಪರಿನಿರ್ವಾಣ ಹೊಂದಿದ ದಿನ ಶೋಕಾಚರಣೆಗೆ ಮೀಸಲಾಗಿರಬೇಕೇ ಹೊರತು ವಿಜಯೋತ್ಸವಗಳಿಗೆ ಅಲ್ಲವೆಂದು ತಿಳಿಸಿದರು.

ಈ ಹಿಂದಿನ ಸಾಲಿನಲ್ಲಿಯೂ ಬಿಎಸ್‍ಪಿ ವತಿಯಿಂದ ಜಿಲ್ಲಾಡಳಿತಕ್ಕೆ ಸಂವಿಧಾನವನ್ನು ರಚಿಸುವ ಮೂಲಕ ಶೋಷಿತ ಸಮುದಾಯಗಳ ಸಮಾನತೆಗಾಗಿ ಸಾಕಷ್ಟು ಅವಕಾಶಗಳನ್ನು ಒದಗಿಸಿದ ಮಹಾನ್ ವ್ಯಕ್ತಿ. ಇಂತಹ ವ್ಯಕ್ತಿ ಪರಿನಿರ್ವಾಣ ಹೊಂದಿದ ದಿನ ಶೋಕಾಚರಣೆಗೆ ಮೀಸಲಾಗಿರಬೇಕೇ ಹೊರತು ವಿಜಯೋತ್ಸವಗಳಿಗೆ ಅಲ್ಲವೆಂದು ತಿಳಿಸಿದರು.

ಈ ಹಿಂದಿನ ಸಾಲಿನಲ್ಲಿಯೂ ಬಿಎಸ್‍ಪಿ ವತಿಯಿಂದ ಜಿಲ್ಲಾಡಳಿತಕ್ಕೆ ಪಕ್ಷದ ಜಿಲ್ಲಾ ಸಂಯೋಜಕ ರಫೀಕ್ ಖಾನ್ ಮಾತನಾಡಿ, ಸರ್ವರಿಗೂ ಸಮಪಾಲು, ಸಮಬಾಳನ್ನು ನೀಡುವ ಸಂವಿಧಾನವನ್ನು ರಚಿಸಿದ ಡಾ.ಅಂಬೇಡ್ಕರ್ ಅವರು ಪರಿನಿರ್ವಾಣ ದಿನದಂದು ಶೋಕಾಚರಣೆ ಮಾಡಬೇಕೆನ್ನುವ ನಮ್ಮ ಆಗ್ರಹಕ್ಕೆ ಸರ್ಕಾರ ಕಿವಿಗೊಡದಿರುವದು ವಿಷಾದನೀಯವೆಂದರು. ಇಡೀ ದೇಶವೇ ಡಾ.ಬಿ.ಆರ್. ಅಂಬೇಡ್ಕರ್ ರವರ ಪರಿನಿರ್ವಾಣ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಬೇಕಾಗಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್‍ಪಿ ಜಿಲ್ಲಾ ಖಜಾಂಚಿ ದಿಲೀಪ್ ಕುಮಾರ್, ನಗರಾಧ್ಯಕ್ಷ ಹರೀಶ್, ನಗರ ಪ್ರಧಾನ ಕಾರ್ಯದರ್ಶಿ ಗಣೇಶ್ ಹಾಗೂ ನಗರ ಕಾರ್ಯದರ್ಶಿ ಫಿಲೋಮಿನಾ ಉಪಸ್ಥಿತರಿದ್ದರು.