ಕೂಡಿಗೆ, ಡಿ. 4: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕೂಡಿಗೆ ವಲಯದ ಹೆಗ್ಗಡಹಳ್ಳಿ ಸಮುದಾಯ ಭವನದಲ್ಲಿ ನಡೆದ ಪರಿಸರ ಸ್ವಚ್ಛತೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಪ್ರತಿ ಮನೆಗೊಂದರಂತೆ ವರ್ಷಕ್ಕೊಂದು ಗಿಡ ನೆಟ್ಟು ಪೋಷಿಸಿದರೆ ಮನೆಮಂದಿಗೆಲ್ಲ ಶುದ್ದವಾದ ಗಾಳಿ, ನೆರಳು ಸಿಗುವದರೊಂದಿಗೆ ಆರೋಗ್ಯಕರ ಪರಿಸರ ದೊರೆಯಲಿದೆ ಎಂದರು. ವಲಯದ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ, ಸಂಘಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಸದಸ್ಯರೆಲ್ಲರೂ ಒಂದಾಗಿ ಶ್ರಮಿಸಬೇಕು ಎಂದರು. ಸಭಾಧ್ಯಕ್ಷತೆಯನ್ನು ಒಕ್ಕೂಟ ಅಧ್ಯಕ್ಷ ಮಂದಾಕಿನಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಜಾಸತ್ಯ ಪತ್ರಿಕೆಯ ಪ್ರತಿನಿಧಿ ಗಣೇಶ್, ಕೂಡಿಗೆ ಪದಾಧಿಕಾರಿಗಳಾದ ರಾಧ, ರಾಣಿ, ಮಂಜುಳಾ, ಸರಸ್ವತಿ, ಶೃತಿ, ಸೇವಾ ಪ್ರತಿನಿಧಿ ಸುನಂದ ಹಾಗೂ ಸ್ವಸಹಾಯ ಸಂಘಗಳ ಸದಸ್ಯರುಗಳು ಉಪಸ್ಥಿತರಿದ್ದರು.