ಗೋಣಿಕೊಪ್ಪ ವರದಿ, ಡಿ. 4: ಪೆÇನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಮಂಡೇಪಂಡ ಸುಬ್ರಮಣಿ ಸ್ಮಾರಕ ಪ್ರಾಥಮಿಕ ಬಾಲಕ, ಬಾಲಕಿಯರ ಹಾಕಿ ಟೂರ್ನಿಯ 2 ವಿಭಾಗದಲ್ಲೂ ಪೆÇನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಬಾಲಕರಲ್ಲಿ ಲಯನ್ಸ್, ಬಾಲಕಿಯರಲ್ಲಿ ಚಿನ್ಮಯ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.

ಬಾಲಕಿಯರ ವಿಭಾಗ: ಫೈನಲ್ ನಲ್ಲಿ ಪೆÇನ್ನಂಪೇಟೆ ಸರ್ಕಾರಿ ಪ್ರಾಥಮಿಕ ತಂಡವು ಚಿನ್ಮಯ ವಿರುದ್ಧ 3-0. ಗೋಲುಗಳ ಗೆಲವು ದಾಖಲಿಸಿತು. ಪೆÇನ್ನಂಪೇಟೆ ಪರ 4ನೇ ನಿಮಿಷದಲ್ಲಿ ಅಭಿನಂದನಾ, 9ರಲ್ಲಿ ಕೀರ್ತನಾ ಗೋಲು ಹೊಡೆದು ಪ್ರಶಸ್ತಿ ತಂದುಕೊಟ್ಟರು.

ಮೊದಲ ಸೆಮಿಯಲ್ಲಿ ಪೆÇನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ತಂಡ ಲಯನ್ಸ್ ತಂಡವನ್ನು 4-0ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರ 2 ಹಾಗೂ 4ನೇ ನಿಮಿಷಗಳಲ್ಲಿ ಕೀರ್ತನಾ, 5ರಲ್ಲಿ ತುಷಾರಾ, 8ರಲ್ಲಿ ಅಭಿನಂದನಾ ಗೋಲು ಬಾರಿಸಿದರು.

2ನೇ ಸೆಮಿಯಲ್ಲಿ ಚಿನ್ಮಯ ತಂಡವು ಭಾರತೀಯ ಕೊಡಗು ವಿದ್ಯಾಲಯ ತಂಡವನ್ನು ಟೈ ಬ್ರೇಕರ್‍ನಲ್ಲಿ, 5-3 ಗೋಲುಗಳ ಮೂಲಕ ಮಣಿಸಿತು. ಚಿನ್ಮಯ ಪರ ಸಿಂಚನಾ, ನಿಧಿ, ಪ್ರಜ್ಞಾ, ಆಶಿಕಾ, ನೇಹಾ, ವಿದ್ಯಾಲಯ ಪರ ಆಶಿಕಾ, ತೇಜಸ್ವಿನಿ, ತ್ರೇಯಾ ಗೋಲು ಹೊಡೆದರು.

ಬಾಲಕರ ವಿಭಾಗ: ಬಾಲಕರಲ್ಲಿ ಪೆÇನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ತಂಡ ಲಯನ್ಸ್ ವಿರುದ್ದ 2-1 ಗೋಲುಗಳಿಂದ ಜಯಿಸಿತು. ಪೆÇನ್ನಂಪೇಟೆ ಪರ 3ರಲ್ಲಿ ಕೌಶಿಕ್, 9ರಲ್ಲಿ ನಾಚಪ್ಪ, ಲಯನ್ಸ್ ಪರ 13ರಲ್ಲಿ ರಜತ್ ಗೋಲು ಹೊಡೆದರು.

ಸೆಮಿಯಲ್ಲಿ ಪೆÇನ್ನಂಪೇಟೆ ಸರ್ಕಾರಿ ಶಾಲಾ ತಂಡ ರಾಮಟ್ರಸ್ಟ್ ತಂಡವನ್ನು 5-1 ಗೋಲುಗಳ ಮೂಲಕ ಸೋಲಿಸಿತು. ಪೆÇನ್ನಂಪೇಟೆ ಪರ 15, 23, 35, 39ನೇ ನಿಮಿಷದಲ್ಲಿ ಶಶಾಂಕ್ ಹ್ಯಾಟ್ರಿಕ್ ಸೇರಿ 4 ಗೋಲು ಸಿಡಿಸಿದರು. 37ರಲ್ಲಿ ಕೌಶಿಕ್, ರಾಮಟ್ರಸ್ಟ್ ಪರ 15ರಲ್ಲಿ ಸೂರ್ಯ ಏಕೈಕ ಗೋಲು ಹೊಡೆದರು.

ಮತ್ತೊಂದು ಸೆಮಿಯಲ್ಲಿ ಲಯನ್ಸ್ ತಂಡವು 2-0 ಗೋಲುಗಳಿಂದ ಜಯ ಪಡೆಯಿತು. ಲಯನ್ಸ್ ಪರ 22ರಲ್ಲಿ ಆಕರ್ಶ್, 33ರಲ್ಲಿ ಶಿವಾಂತ್ ಗೋಲು ಹೊಡೆದರು.ದಾನಿ ಮಂಡೇಪಂಡ ಪಾರ್ವತಿ ಸುಬ್ರಮಣಿ, ಹಾಕಿ ಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ, ಉಪಾಧ್ಯಕ್ಷ ಲವಕುಮಾರ್ ಬಹುಮಾನ ವಿತರಿಸಿದರು. - ಸುದ್ದಿಪುತ್ರ