ಮಡಿಕೇರಿ, ಡಿ. 4: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಕೊಡಗು ತಂಡ ಪ್ರಶಸ್ತಿ ಗಳಿಸಿದೆ. ಈ ತಂಡವನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದ ಜಿಲ್ಲೆಯ ಬಾಲಕಿಯರು ಇದೀಗ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಗೊಂಡಿದ್ದಾರೆ.ಫೈನಲ್‍ನಲ್ಲಿ ಕೊಡಗು ಬಾಲಕಿಯರ ತಂಡ ಚಿಕ್ಕೋಡಿ ತಂಡವನ್ನು 16-4 ರಿಂದ ಮಣಿಸಿತು. ಕೊಡಗು ತಂಡದ ಗಾನವಿ ಎಂ.ಪಿ. (13 ಗೋಲು) ಉತ್ತಮ ಶೂಟರ್ ಪ್ರಶಸ್ತಿ ಗಳಿಸಿದ್ದಾರೆ. ತಂಡವನ್ನು ದೀಷ್ಮಾ, ತುಷಾಲಿ ಎ.ಎಲ್., ಪ್ರೇಕ್ಷಿತಾ ಬಿ.ಎಸ್., ದೀಕ್ಷಿತಾ ಎಸ್., ಗಾನವಿ ಎಂ.ಪಿ., ತೀಯಾ ವರ್ಗೀಸ್, ವೈಡೂರ್ಯ ಕಾವೇರಮ್ಮ, ಯೋಗಿತಾ, ಚೈತ್ರಾ, ಅಶ್ವಿತಾ, ಪ್ರಥ್ವಿ, ಶರಣ್ಯ, ಕೆ.ಎಸ್. ಅನನ್ಯ, ಟಿ.ಬಿ. ಪರಿಮಳ, ತಾನಿಯಾ, ಫಾತಿಮಾ ಮತ್ತು ನೇಹಾ ಪ್ರತಿನಿಧಿಸಿದ್ದರು.