ಮಡಿಕೇರಿ, ಡಿ. 5: ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯ ಹಾಗೂ ದುಷ್ಪರಿಣಾಮ ಉಂಟಾದ ಭೂಕುಸಿತ ದಿಂದ ಮನೆ, ಆಸ್ತಿ-ಪಾಸ್ತಿ ಕಳೆದು ಕೊಂಡಿರುವ ಹಲವಾರು ಕುಟುಂಬ ದವರಲ್ಲಿ ಆಯ್ದ 30 ಕುಟುಂಬದವರಿಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ “ನಿಂಗಕ್ ನಂಗ ಉಂಡ್” ಎಂಬ ವಿಶೇಷ ಕಾರ್ಯಕ್ರಮದಡಿಯಲ್ಲಿ ಧನ ಸಹಾಯ ನೀಡುವ ಕಾರ್ಯಕ್ರಮವನ್ನು ತಾ. 6 ರಂದು ಹಮ್ಮಿಕೊಳ್ಳಲಾಗಿದೆ.

ಪೂಮಾಲೆ ಕೊಡವ ವಾರಪತ್ರಿಕೆ ವತಿಯಿಂದ ಸಂಗ್ರಹಿಸಲಾದ ರೂ. 2.5 ಲಕ್ಷ ಹಣವನ್ನು ಕೊಡವ ತಕ್ಕ್ ಪರಿಷತ್, ಕೊಡವ ಪೊಮ್ಮಕ್ಕಡ ಒಕ್ಕೂಟ ಹಾಗೂ ವೀರಾಜಪೇಟೆ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿತರಿಸ ಲಾಗುವದು. ಏಳುನಾಡಿನಲ್ಲಿ ನಡೆದ ದುರಂತದ ಪ್ರತ್ಯಕ್ಷದರ್ಶಿಗಳಾದ ಮಾಜಿ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮಕ್ಕಂದೂರು ಕೊಡವ ಸಮಾಜ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಅಂದಿನ ದಿನ ತಮ್ಮ ಅನುಭವವನ್ನು ಹಂಚಿಕೊಳ್ಳಲಿರುವರು.

ಕಾರ್ಯಕ್ರಮವನ್ನು ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಉದ್ಘಾಟಿಸುವರು. ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರ ಅಧ್ಯಕ್ಷತೆಯ ಕಾರ್ಯಕ್ರಮಕ್ಕೆ ವೀರಾಜಪೇಟೆ ಕೊಡವ ಸಮಾಜ ಅಧ್ಯಕ್ಷÀ ವಾಂಚಿರ ಟಿ. ನಾಣಯ್ಯ, ಗೋಣಿಕೊಪ್ಪ ಕೊಡವ ಸಮಾಜ ಅಧ್ಯಕ್ಷ ಚೆಕ್ಕೆರ ಸೋಮಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿ ರುವರು. ಆರ್ಜಿ ಗ್ರಾಮಸ್ಥ ಪಾಡೆಯಂಡ ಕೆ. ಸತೀಶ್ ಕಾರ್ಯಪ್ಪ ತಂಡದವರಿಂದ ತಾಲಿಪಾಟ್, ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಹಲವು ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.