ಮಡಿಕೇರಿ, ಡಿ. 5: 2017-18ನೇ ಸಾಲಿನ ಎರಡನೇ ಕಂತಿನ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಅವರು ಒಪ್ಪಿಗೆ ನೀಡಿದ್ದು, ರೂ. 2.40 ಕೋಟಿಯ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿದ್ದಾರೆ.

ನ. 29 ರಂದು ಅವರು ಈ ಬಗ್ಗೆ ಪಟ್ಟಿ ಅಂತಿಮಗೊಳಿಸಿದ್ದು, ಕಾಮಗಾರಿಗಳ ವಿವರವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜಿಲ್ಲೆಯ ಮೂರು ತಾಲೂಕುಗಳ ಒಟ್ಟು 53 ಕಾಮಗಾರಿಗಳಿಗೆ ಅವರು ಅನುದಾನ ಬಿಡುಗಡೆಗೆ ಮಾಹಿತಿ ನೀಡಿದ್ದಾರೆ.

ಕಾಮಗಾರಿಗಳ ವಿವರ ಇಂತಿದೆ: ಸೋಮವಾರಪೇಟೆ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹೊಂದಿರುವ ಸೋಮವಾರಪೇಟೆ ಟೌನ್‍ನಲ್ಲಿರುವ ನಿವೇಶನದಲ್ಲಿ ರೈತ ಸಭಾಂಗಣ ನಿರ್ಮಾಣ ಕಾಮಗಾರಿಗಾಗಿ ರೂ. 5 ಲಕ್ಷ, ವೀರಾಜಪೇಟೆ ತಾಲೂಕು ಪೊಳ್ಳಬೆಟ್ಟ ಮಹಿಳಾ ಸಹಕಾರ ಸಮಾಜ ಕಟ್ಟಡದ ಮುಂದುವರಿದ ಕಾಮಗಾರಿ ರೂ. 3 ಲಕ್ಷ, ವೀರಾಜಪೇಟೆ ತಾಲೂಕು ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಕಟ್ಟಡದ ಮುಂದುವರಿದ ಕಾಮಗಾರಿ ರೂ. 5 ಲಕ್ಷ, ಗರ್ವಾಲೆ ಕೊಡವ ಸಮಾಜದ ಸಮುದಾಯ ಭವನ ಕಟ್ಟಡದ ಮುಂದುವರಿದ ಕಾಮಗಾರಿ ರೂ. 2 ಲಕ್ಷ, ಬಿ. ಶೆಟ್ಟಿಗೇರಿ ಮುಖ್ಯ ರಸ್ತೆಯಿಂದ ಆಟ್ರಂಗಡ ಅಣ್ಣಯ್ಯ ಅವರ ಮನೆಯ ಮುಂದಿನ ಎಡಭಾಗದಿಂದ ಮಂದಮಾಡ ಪಳ್ಳಿಯವರೆಗೆ (ಕೂಡಣ ರಸ್ತೆ) ರಸ್ತೆ ಅಭಿವೃದ್ಧಿ ಕಾಮಗಾರಿ ರೂ. 2 ಲಕ್ಷ, ಕುಂಜಲಗೇರಿ ಗ್ರಾಮದ ಪಾರಾಣೆ ಮುಖ್ಯ ರಸ್ತೆಯಿಂದ ಪಾಕೇರಿಗೆ ಹೋಗುವ ರಸ್ತೆಯ (ಪೊಂಜಾಡ ಐನ್‍ಮನೆಯ) ಅಭಿವೃದ್ಧಿ ಕಾಮಗಾರಿ ರೂ. 4 ಲಕ್ಷ, ಅಮ್ಮತ್ತಿ ಗ್ರಾಮದ ಮಾಚಿಮಂಡ ದೇವಯ್ಯ ಮೆಮೋರಿಯಲ್ ಪಬ್ಲಿಕ್ ಶಾಲೆಯ ಕೊಠಡಿ ನಿರ್ಮಾಣದ ಮುಂದುವರಿದ ಕಾಮಗಾರಿ ರೂ. 2 ಲಕ್ಷ, ವೀರಾಜಪೇಟೆ ಕೊಡವ ಸಮಾಜದ ಸಮುದಾಯ ಭವನ ನಿರ್ಮಾಣದ ಕಾಮಗಾರಿ ರೂ. 5 ಲಕ್ಷ, ಚೆಂಬೆಬೆಳ್ಳೂರು ಗ್ರಾಮದ ಕುಂದೀರ, ಚಾರಿಮಂಡ, ಉಳ್ಳಿಯಡ ಕುಟುಂಬಸ್ಥರ ಮನೆಗಳಿಗೆ ತೆರಳುವ ಸಾರ್ವಜನಿಕ ರಸ್ತೆ ಅಭಿವೃದ್ಧಿ ಕಾಮಗಾರಿ ರೂ. 5 ಲಕ್ಷ, ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಾಲು ಗ್ರಾಮದ ಬೊಜ್ಜಂಗಡ ಕುಟುಂಬಸ್ಥರ ಸಾರ್ವಜನಿಕ ರಸ್ತೆ ಅಭಿವೃದ್ಧಿ ಕಾಮಗಾರಿ ರೂ. 5 ಲಕ್ಷ, ಮಾಯಮುಡಿ ಶ್ರೀ ಬಸವೇಶ್ವರ ಯುವಕ ಸಂಘ, ಮಡಿಕೆಬೀಡು (ರಿ), ಸಮುದಾಯ ಭವನದ ಮುಂದುವರಿದ ಕಾಮಗಾರಿ ರೂ. 3 ಲಕ್ಷ, ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವಾಡಿ, ಕುಂಬೇರಿ ಗ್ರಾಮದ ಸಾರ್ವಜನಿಕರು ಓಡಾಡುವ ರಸ್ತೆಗೆ ಬೀದಿದೀಪ ಅಳವಡಿಸುವ ಕಾಮಗಾರಿ ರೂ. 2 ಲಕ್ಷ, ಪೊನ್ನಂಪೇಟೆ ಹೋಬಳಿ ಕೇಂದ್ರದಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣದ ಕಾಮಗಾರಿ ರೂ. 2 ಲಕ್ಷ, ಕಮಟೆ ಗ್ರಾಮದ ಶ್ರೀ ಮಹದೇಶ್ವರ ದೇವಸ್ಥಾನ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರೂ. 3 ಲಕ್ಷ, ಗೋಣಿಕೊಪ್ಪಲು ಅತ್ತೂರು ಗ್ರಾಮ, ನ್ಯಾಷನಲ್ ಅಕಾಡೆಮಿ ಶಾಲೆಯ ತಡೆಗೋಡೆ ನಿರ್ಮಾಣಕ್ಕೆ ರೂ. 5 ಲಕ್ಷ, ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆರ್ಜಿ - ಪೆರುಂಬಾಡಿಯಿಂದ ಹೆಗ್ಗಳ, ನಿರ್ಮಲಗಿರಿಗೆ ಹೋಗುವ ರಸ್ತೆ ಅಭಿವೃದ್ಧಿಗಾಗಿ ರೂ. 5 ಲಕ್ಷ, ಬಾಳುಗೋಡು ಗ್ರಾಮ, ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ರೂ. 3 ಲಕ್ಷ, ಹಾತೂರು, ಕೊಳತ್ತೋಡು, ಬೈಗೋಡು ಗ್ರಾಮದಿಂದ ಮಹಾದೇವರ ದೇವಾಲಯ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರೂ. 3 ಲಕ್ಷ, ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಅಂಗಡಿ ಮಳಿಗೆಗಳ ಮುಂದುವರಿದ ಕಾಮಗಾರಿಗಾಗಿ ರೂ. 4 ಲಕ್ಷ, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 2 ಲಕ್ಷ, ಕೊಡಗು ಪ್ಲಾಂಟರ್ಸ್ ಕ್ಲಬ್‍ನ ಟೆನ್ನಿಸ್ ಕ್ಲಬ್ ಅಭಿವೃದ್ಧಿಗೆ ರೂ. 6 ಲಕ್ಷ, ಹುದಿಕೇರಿ ಕೊಡವ ಸಮಾಜದ ಕಟ್ಟಡ ನಿರ್ಮಾಣದ ಮುಂದುವರಿದ ಕಾಮಗಾರಿಗಾಗಿ ರೂ. 2 ಲಕ್ಷ, ನಾಲ್ಕೇರಿ ಗ್ರಾಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಕಟ್ಟಡದ ಮುಂದುವರಿದ ಕಾಮಗಾರಿಗಾಗಿ ರೂ. 2 ಲಕ್ಷ, ಕೊತೂರು - ಕಾನೂರು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರೂ. 2 ಲಕ್ಷ, ಮೂರ್ನಾಡು - ಬಾಡಗ ಗ್ರಾಮಕ್ಕೆ ನೀರು ಸಂಪರ್ಕಕ್ಕೆ ರೂ. 2 ಲಕ್ಷ, ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ರೂ. 3 ಲಕ್ಷ, ಸೋಮವಾರಪೇಟೆ ತಾಲೂಕು, ಕೊಡವ ಸಮಾಜದ ಸಮುದಾಯ ಭವನ ನಿರ್ಮಾಣದ ಮುಂದುವರಿದ ಕಾಮಗಾರಿಗೆ ರೂ. 5 ಲಕ್ಷ, ಬಾಳೆಲೆ ಗ್ರಾಮದ ಅಳಮೇಂಗಡ ಕುಟುಂಬಸ್ಥರ ಮನೆ ಸಂಪರ್ಕಿಸುವ ರಸ್ತೆಗೆ ರೂ. 3 ಲಕ್ಷ, ದೊಡ್ಡತೋಳೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷ, ಪಾಲಿಬೆಟ್ಟ ಚೆಸೈರ್ ಹೋಂ ಇಂಡಿಯಾ ಕೂರ್ಗ್ ಕಟ್ಟಡದ ಮುಂದುವರಿದ ಕಾಮಗಾರಿಗೆ ರೂ. 3 ಲಕ್ಷ, ಬಿಟ್ಟಂಗಾಲ ಭಗವತಿ ದೇವಸ್ಥಾನದ ಹತ್ತಿರವಿರುವ ಸಮುದಾಯ ಭವನ ನಿರ್ಮಾಣಕ್ಕೆ ರೂ. 5 ಲಕ್ಷ, ಕಾಕೋಟುಪರಂಬು ಸ್ಪೋಟ್ರ್ಸ್ ಕ್ಲಬ್ ಕಟ್ಟಡ ನಿರ್ಮಾಣದ ಮುಂದುವರಿದ ಕಾಮಗಾರಿಗೆ ರೂ. 5 ಲಕ್ಷ, ಪೆರೂರು ಗ್ರಾಮದಿಂದ ಬಲ್ಲಮಾವಟ್ಟಿ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಮಾದಾಪುರ ಕೊಡವ ಸಮಾಜದ ಕಟ್ಟಡ ನಿರ್ಮಾಣಕ್ಕೆ ರೂ. 5 ಲಕ್ಷ, ಪೊನ್ನಂಪೇಟೆ ಕೊಡವ ಸಮಾಜದ ಕಟ್ಟಡ ನಿರ್ಮಾಣಕ್ಕೆ ರೂ. 5 ಲಕ್ಷ, ಕೈಕೇರಿ ಗ್ರಾಮದ ಸಮುದಾಯ ಭವನ ನಿರ್ಮಾಣದ ಮುಂದುವರಿದ ಕಾಮಗಾರಿಗೆ ರೂ. 5 ಲಕ್ಷ, ಚೌಡ್ಲು ಗ್ರಾಮದ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘ(ರಿ)ದ ಸಭಾಂಗಣ ಭವನ ನಿರ್ಮಾಣದ ಮುಂದುವರಿದ ಕಾಮಗಾರಿಗೆ ರೂ. 20 ಲಕ್ಷ, ಬೆಟ್ಟಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಮೋದಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 15 ಲಕ್ಷ, ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಟಿ. ಶೆಟ್ಟಿಗೇರಿ, ನಾಲ್ಕೇರಿ, ಇಟ್ಟೀರ ಲಕ್ಷ್ಮಣತೀರ್ಥ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 3 ಲಕ್ಷ, ಮಾಯಮುಡಿ ಗ್ರಾಮ ಪಂಚಾಯಿತಿ ಧನಗಾಲು ಮುರುಡೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ. 4 ಲಕ್ಷ, ರೂ. ಬಲ್ಯಮುಂಡೂರು ಗ್ರಾಮ ಪಂಚಾಯಿತಿ ಬಲ್ಯಮುಂಡೂರು ಇಡಿಗೇರಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 2 ಲಕ್ಷ, ಬೇಟೋಳಿ ಗ್ರಾಮ ಪಂಚಾಯಿತಿ ಹೆಗ್ಗಳ ನೂಯಪ್ಪನ ಅಂಗಡಿ ಬಿಟ್ಟಿಮಕ್ಕಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 2 ಲಕ್ಷ, ಅರುವತೋಕ್ಲು ಗ್ರಾಮ ಪಂಚಾಯಿತಿ ಹುದೂರು ಮಾಪಿಳ್ಳೆತೋಡು ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 2 ಲಕ್ಷ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವಿ. ಬಾಡಗ ಅಮ್ಮಣಿಚಂಡ ಸಾರ್ವಜನಿಕ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 2 ಲಕ್ಷ, ಸೋಮವಾರಪೇಟೆ ಪಟ್ಟಣದಲ್ಲಿ ಮಹಿಳಾ ಬ್ಯಾಂಕಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ. 5 ಲಕ್ಷ, ಸುಂಟಿಕೊಪ್ಪ ಹೋಬಳಿ ಕಲ್ಲೂರು ಗ್ರಾಮದ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಕೆಂಚಮ್ಮನ ಬಾಣೆ ಸಮುದಾಯ ಭವನ ನಿರ್ಮಾಣಕ್ಕೆ ರೂ. 5 ಲಕ್ಷ, ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶ್ರೀ ನಾರಾಯಣ ಧರ್ಮ ವಿವಿಧೋದ್ದೇಶ ಸಂಸ್ಥೆ ಕರ್ನಾಟಕ (ರಿ) ರವರ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 10 ಲಕ್ಷ, ಗೋಣಿಕೊಪ್ಪಲುವಿನಲ್ಲಿ ಎಸ್.ಎನ್.ಡಿ.ಪಿ. ಶಾಖೆ ಕಟ್ಟಡ ಹಾಗೂ ಸಮುದಾಯ ಭವನ ನಿರ್ಮಾಣದ ಮುಂದುವರಿದ ಕಾಮಗಾರಿಗೆ ರೂ. 10 ಲಕ್ಷ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಇಗ್ಗುತಪ್ಪ ದೇವಸ್ಥಾನ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲಮಾವಟಿ ಗ್ರಾಮದ ಬೆಳ್ಳಬ್ಬೆ ಗಿರಿಜನ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಸುಳುಗೋಡು ಗ್ರಾಮ ಮುಖ್ಯ ರಸ್ತೆಯಿಂದ ಕಳ್ಳಿಚಂಡ ನಂಜಪ್ಪ ಮತ್ತು ಡಾಲಿ ಕುಟುಂಬಸ್ಥರ ಮನೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರೂ. 2 ಲಕ್ಷ, ಅಮ್ಮತ್ತಿ ಕೊಡವ ಸಮಾಜದ ಸಭಾಂಗಣ ನಿರ್ಮಾಣಕ್ಕೆ ರೂ. 5 ಲಕ್ಷ.