ಸುಂಟಿಕೊಪ್ಪ, ಡಿ. 13: 7ನೇ ಹೊಸಕೋಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಪ್ರೌಢಶಾಲಾ ಶಿಕ್ಷಕರಾದ ಚಂದ್ರಕುಮಾರ ಹಾಗೂ ಬಿಂದು ಕುಮಾರ್ ಚಾಲನೆ ನೀಡಿದರು.

ಮಕ್ಕಳು ಶೈಕ್ಷಣಿಕವಾಗಿ ಮಾತ್ರ ಗಮನಹರಿಸದೆ ವ್ಯಾವಹಾರಿಕ ಜ್ಞಾನವನ್ನು ಪಡೆದುಕೊಳ್ಳಲು ಮಕ್ಕಳ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಇದರ ಸದುಪ ಯೋಗವನ್ನು ಪಡೆದು ಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾವತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಶಾಲಾವರಣದಲ್ಲಿ ವೈವಿಧ್ಯಮಯ ತರಕಾರಿ, ಹಣ್ಣು-ಹಂಪಲು, ತಿಂಡಿ-ತಿನಿಸು ಇನ್ನಿತರ ವಸ್ತುಗಳನ್ನು ತಂದು ಮಾರಾಟ ಮಾಡುವ ಮೂಲಕ ತಮ್ಮಲ್ಲಿರುವ ವ್ಯಾವಹಾರಿಕ ಚಾಕಚಕ್ಯತೆಯನ್ನು ಅನಾವರಣಗೊಳಿಸಿದರು.

ಶಾಲೆಯ ಶಿಕ್ಷಕರುಗಳಾದ ದಿವ್ಯ, ಚಂದ್ರಶೇಖರ, ಶಕಿಲಾ, ವನಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು, ಪೋಷಕರು ಹಾಜರಿದ್ದರು.