ಸೋಮವಾರಪೇಟೆ, ಡಿ. 13: ಕುಶಾಲನಗರದ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ, ಜಾತ್ರೆ ಸಾಂಸ್ಕøತಿಕ ವೇದಿಕೆ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಅಕ್ಷರಮಾಲೆ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಅಕ್ಷರಮಾಲೆ ಸ್ಪರ್ಧೆಯಲ್ಲಿ 8 ತಂಡಗಳಿಂದ 16 ಮಂದಿ ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಸೋಮವಾರಪೇಟೆಯ ಸರಸ್ವತಿ ಮತ್ತು ಕುಶಾಲನಗರದ ಸಚಿನ್, ವೀರಾಜಪೇಟೆಯ ಶ್ರೇಯಸ್ ಮತ್ತು ಕಾವೇರಿ ಪಡೆದರು. ದ್ವಿತೀಯ ಸ್ಥಾನವನ್ನು ಸಿದ್ದಾಪುರದ ಸುನಿಲ್ ಮತ್ತು ಕುಶಾಲನಗರದ ಸರಸ್ವತಿ ಪಡೆದರೆ, ಸೋಮವಾರ ಪೇಟೆಯ ಮನೋಹರ್ ಮತ್ತು ಕುಶಾಲನಗರದ ವೈಭವಿ ಅವರುಗಳು ತೃತೀಯ ಸ್ಥಾನಕ್ಕೆ ಭಾಜನರಾದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಹಿರಿಯ ಕಲಾವಿದ ಟಿ.ಆರ್. ಪ್ರಭುದೇವ್ ಅವರುಗಳು ವಿಜೇತರಿಗೆ ಬಹುಮಾನ ವಿತರಿಸಿದರು.