ಮಡಿಕೇರಿ, ಡಿ. 13: ಭಾಗಮಂಡಲ ವ್ಯಾಪ್ತಿಯ ಮುಂಡ್ರೋಟು ಅರಣ್ಯದಲ್ಲಿ, ಕೇರಳದ ತೆಯ್ಯಣಿಯ ನಿವಾಸಿ ಜಾರ್ಜ್ ಎಂಬವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.ಶಸ್ತ್ರಾಸ್ತ್ರ ಕಾಯ್ದೆ 304 ಐಪಿಸಿ ಅನ್ವಯ ಮೊಕದ್ದಮೆ ದಾಖಲಾಗಿದ್ದು, ಜಾರ್ಜ್‍ನೊಂದಿಗೆ ಮುಂಡ್ರೋಟು ಅರಣ್ಯಕ್ಕೆ ಪ್ರಾಣಿ ಬೇಟೆಗೆ ಬಂದಿದ್ದ ಚಂದ್ರನ್ ಹಾಗೂ ಅಶೋಕನ್ ಇವರುಗಳ ವಿರುದ್ಧ ಸಂಶಯಾಸ್ಪದ ಗುಂಡೇಟು ಪ್ರಕರಣವಾಗಿರಬಹುದು ಎಂದು ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.ಆರೋಪಿಗಳು ಅಕ್ರಮ ಶಶ್ತ್ರಾಸ್ತ್ರ ಹೊಂದಿರುವ ಕುರಿತು ವಿಚಾರಣೆ ನಡೆದಿರುವದಾಗಿ ಡಾ. ಸುಮನ್ ಡಿ.ಪಿ. ತಿಳಿಸಿದ್ದಾರೆ. ಪ್ರಾಣಿ ಬೇಟೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಯಾವದೇ ಕುರುಹು ದೊರೆಯದಿರುವದರಿಂದ ಅರಣ್ಯಾಧಿಕಾರಿಗಳು ಅಕ್ರಮ ಬೇಟೆ ಪ್ರಕರಣವೆಂದು ಮೊಕದ್ದಮೆ ದಾಖಲಿಸಿಲ್ಲವೆಂದು ತಿಳಿದು ಬಂದಿದೆ.