ಮಡಿಕೇರಿ, ಡಿ. 13: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 2018 ಅಕ್ಟೋಬರ್ 3 ರಿಂದ 18 ರವರೆಗೆ ನಡೆದ ಆಸ್ಟ್ರೇಲಿಯಾ-ಏಷ್ಯಾ ರಸ್ತೆ ಸುರಕ್ಷಾ ಸಮ್ಮೇಳನ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ ಸಾರಿಗೆ ಇಲಾಖೆ ವತಿಯಿಂದ ಆಯ್ಕೆಯಾದ 4 ಮಂದಿ ಸದಸ್ಯರಲ್ಲಿ ಒಬ್ಬರಾಗಿ ತೆರಳಿದ್ದ ಜಯನಗರ ಸಾರಿಗೆ ವಿಭಾಗದ ಹಿರಿಯ ಮೋಟಾರ್ ವಾಹನದ ತನಿಖಾಧಿಕಾರಿ ಕೊಡಗಿನ ಮಡಿಕೇರಿಯ ನಿವಾಸಿಯೂ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ಇದರ ಉಪಾಧ್ಯಕ್ಷ ಎಂ.ಬಿ. ನಾಸಿರ್ ಅಹಮದ್ ಅವರನ್ನು ಮಡಿಕೇರಿಯ ಕಾವೇರಿ ಹೊಟೇಲ್ ಸಭಾಂಗಣ ದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸನ್ಮಾನಿಸಲಾಯಿತು.

ಅಧ್ಯಕ್ಷ ಬಿ.ಎಸ್. ಷಂಶುದ್ದೀನ್, ಕರ್ನಾಟಕ ಬ್ಯಾರಿ ಅಕಾಡೆಮಿಯ ಸದಸ್ಯ ಶರೀಫ್, ಮಡಿಕೇರಿಯ ಎಸ್.ಐ. ಮುನೀರ್ ಅಹಮದ್, ಸದಸ್ಯ ಜಿ.ಹೆಚ್. ಮೊಹಮ್ಮದ್ ಹನೀಫ್ ಹಾಗೂ ಟ್ರಸ್ಟ್‍ನ ಸದಸ್ಯರು ಭಾಗವಹಿಸಿದ್ದರು.

ಈ ಸಭೆಯಲ್ಲಿ ಅಬ್ದುಲ್ಲಾ ಮಡಿಕೇರಿ ಸ್ವಾಗತಿಸಿದರು. ಸಭೆಯಲ್ಲಿ ಸನ್ಮಾನಕ್ಕೂ ಮೊದಲು ಬ್ಯಾರಿ ಸಮುದಾಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿದಿರುವ ಸಾಧಕರಿಗೆ ಸನ್ಮಾನ ಮತ್ತು ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ಮುಂದಿನ ಜನವರಿಯಲ್ಲಿ ಮಡಿಕೇರಿಯಲ್ಲಿ ನಡೆಯಲಿರುವ ಬ್ಯಾರಿ ಸಮ್ಮೇಳನದಲ್ಲಿ ನೀಡಲು ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ವ್ಯೆವಿದ್ಯಮಯ ಕಾರ್ಯಕ್ರಮಗಳು, ಬ್ಯಾರಿ ಹಾಡುಗಾರಿಕೆ, ಕವಿಗೋಷ್ಠಿ. ದಫ್ ಪ್ರದರ್ಶನ, ಬ್ಯಾರಿ ಸಮುದಾಯದ ಜನರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಇದರ ಭಾಗವಾಗಿ ಬ್ಯಾರಿ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲು ಚರ್ಚಿಸಲಾಯಿತು. ಸಮ್ಮೇಳನದ ಭಾಗವಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.