ಮಡಿಕೇರಿ, ಡಿ. 12: ಪರಿಶಿಷ್ಟ ಜಾತಿಯವರ ಮೇಲೆ ನಡೆಯುತ್ತಿರುವ ಅಸ್ಪøಶ್ಯತೆ ನಿವಾರಣೆ ಮಾಡಲು ಹಾಗೂ ದೌರ್ಜನ್ಯ ಅಪರಾಧಗಳ ನಿಯಂತ್ರಣದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿ, ಸರ್ಕಾರೇತರ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶಸ್ತಿಯನ್ನು ಪಡೆಯಲು ಯಾವದೇ ಜನಾಂಗ, ಲಿಂಗ, ಜಾತಿ ಅಥವಾ ಸಮುದಾಯದ ವ್ಯತ್ಯಾಸವಿಲ್ಲದೆ ಅಥವಾ ತಾರತಮ್ಯವಿಲ್ಲದೆ ಈ ಪ್ರಶಸ್ತಿಗೆ ಯಾವದೇ ಭಾರತೀಯರು ಮತ್ತು ಸಂಸ್ಥೆಯವರು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿಯವರ ಮೇಲೆ ನಡೆಯುತ್ತಿರುವ ಅಸ್ಪøಶ್ಯತೆ ನಿವಾರಣೆ ಮಾಡಲು ಹಾಗೂ ದೌರ್ಜನ್ಯ ಅಪರಾಧಗಳ ನಿಯಂತ್ರಣದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿ/ ಸರ್ಕಾರೇತರ ಸಂಘ ಸಂಸ್ಥೆಗಳಾಗಿರಬೇಕು. ಪರಿಶಿಷ್ಟ ಜಾತಿ ಜನಾಂಗದವರ ಅಭಿವೃದ್ಧಿಗಾಗಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿರುವ ನೋಂದಣಿಯಾಗಿರುವ ಸರ್ಕಾರೇತರ ಸಂಘ-ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ದೂ. 08272-225531, 08272-223552, 08276-281115, 08274-249476 ನ್ನು ಸಂಪರ್ಕಿಸಬಹುದು.