ವೀರಾಜಪೇಟೆ, ಡಿ. 13: ವೀರಾಜಪೇಟೆ ರೋಟರಿ ಕ್ಲಬ್ ವತಿಯಿಂದ ರೋಟರಿ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ‘ಉಚಿತ ಮಧುಮೇಹ ಮತ್ತು ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ’ದಲ್ಲಿ ಮೂಳೆ ಸವೆತ ಎಂಬ ರೋಗವನ್ನು ಹೆಸರಾಂತ ವೈದ್ಯರುಗಳು ಪರೀಕ್ಷಿಸಿ ಉಚಿತವಾಗಿ ಚಿಕಿತ್ಸೆ ನೀಡಿದರು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಸ್. ರವಿ, ಕಾರ್ಯದರ್ಶಿ ಚೇತನ್ ಮುತ್ತಣ್ಣ, ಹಿರಿಯ ತಜ್ಞ ವೈದ್ಯ ಡಾ. ಪಿ.ಕೆ. ಉತ್ತಪ್ಪ, ಡಾ. ಎಸ್.ವಿ. ನರಸಿಂಹನ್, ಮೈಸೂರಿನ ಡಾ. ನಾಗರಾಜು ಹಾಗೂ ಮುನಿಯಪ್ಪ, ಬೆಂಗಳೂರಿನ ಪವನ್, ಚಂದ್ರಶೇಖರ್ ಹಾಗೂ ರೋಟರಿ ಕ್ಲಬ್ ಸದಸ್ಯರಾದ ಡಾ. ಲವಿನ್ ಚಂಗಪ್ಪ, ರೋ. ಉದಯಕುಮಾರ್ ಹಾಗೂ ಮುಂತಾದವರು ಭಾಗವಹಿಸಿದ್ದರು.