ಮಡಿಕೇರಿ, ಡಿ. 13: ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಮುಂದಿನ ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೆ ನಡೆಯಲಿವೆ. ಪ್ರತಿ ಪರೀಕ್ಷೆಯ ನಡುವೆ ಒಂದು ದಿನ ಬಿಡುವು ನೀಡಲಾಗಿದ್ದು, ಮಾರ್ಚ್ 21 ರಂದು ಪ್ರಥಮ ಭಾಷೆ, ಮಾರ್ಚ್ 23 ರಂದು ಕೋರ್ ಸಬ್ಜೆಕ್ಟ್, ಮಾರ್ಚ್ 25 ರಂದು ಗಣಿತ, ಮಾರ್ಚ್ 27 ರಂದು ದ್ವಿತೀಯ ಭಾಷೆ, ಮಾರ್ಚ್ 29 ರಂದು ಸಮಾಜ ವಿಜ್ಞಾನ, ಏಪ್ರಿಲ್ 2 ರಂದು ವಿಜ್ಞಾನ ಮತ್ತು ಏಪ್ರಿಲ್ 4 ರಂದು ತೃತೀಯ ಭಾಷೆ ಪರೀಕ್ಷೆ ನಡೆಯಲಿವೆ ಎಂದು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ತಿಳಿಸಿದೆ.