*ಗೋಣಿಕೊಪ್ಪಲು, ಡಿ. 13: ವೀರಾಜಪೇಟೆ ಫೆಡರೇಷನ್‍ನ ನೂತನ ಅಧ್ಯಕ್ಷರಾಗಿ ಮಚ್ಚಾಮಾಡ ಕಂದಾ ಭೀಮಯ್ಯ ಮತ್ತು ಉಪಾಧ್ಯಕ್ಷರಾಗಿ ಕುಪ್ಪಂಡ ಮನು ಪೂವಯ್ಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾಗಿರುವ ಎಂ.ಕೆ. ಕಾವೇರಪ್ಪ, ಕೊಕ್ಕಂಡ ಕುಶಾ, ಕೆ.ಕೆ. ಮಂದಣ್ಣ, ಕಾವೇರಿ ಮಂದಣ್ಣ, ಎ.ಕೆ. ಚಿಣ್ಣಪ್ಪ, ಕೆ.ಎಂ. ಪೂವಯ್ಯ, ಎಂ.ಎಂ. ಕುಟ್ಟಪ್ಪ, ಗಿರೀಶ್ ಪೂಣಚ್ಚ, ಎ.ಪಿ. ಬೋಪಣ್ಣ, ಬಿಪಿನ್ ಕಾವೇರಪ್ಪ, ಕೆ.ಆರ್. ವಿನೋದ್, ವೀಣಾ ಮಹೇಶ್, ಕೆ.ಬಿ. ಲತಾ, ಚೆನಿಯಾ, ಮಾರಿಯಪ್ಪ ಹಾಜರಿದ್ದರು.
ಈ ಸಂದರ್ಭ ಹಾಜರಿದ್ದ ತಾಲೂಕು ಬಿಜೆಪಿ ಅಧ್ಯಕ್ಷ ಕುಂಞಗಡ ಅರುಣ್ ಭೀಮಯ್ಯ ಮಾತನಾಡಿ, ಫೆಡರೇಷನ್‍ನ ಎಲ್ಲಾ 17 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ಇದರಿಂದ ತಾಲೂಕಿನಲ್ಲಿ ಪಕ್ಷ ಮತ್ತಷ್ಟು ಪ್ರಬಲವಾಗಿದೆ ಎಂಬದನ್ನು ತೋರಿಸುತ್ತಿದೆ ಎಂದರು.
ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಮುಖಂಡರಾದ ಲಾಲಾ ಭೀಮಯ್ಯ, ಬಾಂಡ್ ಗಣಪತಿ, ಕುಂಬೆಯಂಡ ಗಣೇಶ್, ಮೊಕೊಂಡ ಶಶಿ ಸುಬ್ರಮಣಿ, ಗುಮ್ಮಟೀರ ಕಿಲನ್ ಗಣಪತಿ, ಅಂಜಪರವಂಡ ಅನಿಲ್, ಅಳಮೇಂಗಡ ವಿವೇಕ್, ಕಡೇಮಾಡ ಭರತ್, ಅಣ್ಣಳಮಾಡ ನವೀನ್, ಮಧು ದೇವಯ್ಯ, ಚೋಕಿಮ್ ರಾಡ್ರಿಗಸ್ ಹಾಜರಿದ್ದರು.