ಕುಶಾಲನಗರ, ಡಿ. 13: ಕುಶಾಲನಗರ ಪ.ಪಂ.ನ ಇಬ್ಬರು ಪೌರಕಾರ್ಮಿಕರು ಸ್ವಚ್ಛತೆ ಕಾರ್ಯದ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ವಿದೇಶಕ್ಕೆ ತೆರಳಲಿದ್ದಾರೆ.
ರಾಜ್ಯ ಸರಕಾರ ಯೋಜನೆಯಡಿ ಕುಶಾಲನಗರ ಪ.ಪಂ. ಖಾಯಂ ಪೌರಕಾರ್ಮಿಕರಾದ ಗಣೇಶ್ ಮತ್ತು ರಘು ಅಧ್ಯಯನಕ್ಕೆ ಸಿಂಗಾಪುರಕ್ಕೆ ತೆರಳಲಿದ್ದು, ಇವರಿಗೆ ಪ.ಪಂ. ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಪಂಚಾಯ್ತಿ ಸದಸ್ಯರುಗಳು, ಅಧಿಕಾರಿ ವರ್ಗ, ಪೌರಕಾರ್ಮಿಕರು ಹೂಮಾಲೆ ನೀಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಕೇಶವ, ರೂಪಾ ಉಮಾಶಂಖರ್, ಜಯಲಕ್ಷ್ಮಿ, ಸುರಯ್ಯಭಾನು, ಜಗದೀಶ್, ಅಮೃತ್‍ರಾಜ್, ಮುಖ್ಯಾಧಿಕಾರಿ ಸುಜಯ್‍ಕುಮಾರ್, ಅಭಿಯಂತರೆ ಶ್ರೀದೇವಿ, ಆರೋಗ್ಯ ನಿರೀಕ್ಷಕ ಉದಯ್ ಮತ್ತಿತರರು ಇದ್ದರು.