ಮಡಿಕೇರಿ, ಡಿ. 13: ಪಾಲಿಬೆಟ್ಟ ಗ್ರಾಮ ಪಂಚಾಯತಿ ಇ-ಆಡಳಿತ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಹಾಗೂ ಡಿಜಿಟಲ್ ಲೈಬ್ರರಿ ವ್ಯವಸ್ಥೆಯನ್ನು ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾರಂಭಿಸುವ ಬಗ್ಗೆ ಅಧ್ಯಯನಕ್ಕೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹಾನಬಾಳು ಗ್ರಾ.ಪಂ. ಪ್ರತಿನಿಧಿಗಳ ತಂಡ ಪ್ರವಾಸ ಕೈಗೊಂಡಿತ್ತು.

ಈ ಸಂದರ್ಭ ಹಾಜರಿದ್ದ ಕೊಡಗು ಜಿಲ್ಲಾ ಪಂಚಾಯತಿ ಸ್ವಚ್ಛ ಭಾರತ ಅಭಿಯಾನ ಅಧಿಕಾರಿ ಸೂರಜ್ ಅವರು ಪಾಲಿಬೆಟ್ಟ ಪಂಚಾಯತಿಯಲ್ಲಿ ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮಾಡುವ ಬಗ್ಗೆ ಪ್ರಾತ್ಯಕ್ಷಿಕ ವಿವರಣೆ ನೀಡಿದರು.

ಪಾಲಿಬೆಟ್ಟ ಪಂಚಾಯತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ತಂಡದೊಂದಿಗೆ ಚರ್ಚೆನಡೆಸಿ ಜನಸಹಭಾಗಿತ್ವದ ಯೋಜನೆ ರೂಪಿಸಿ ನೀರು ನೈರ್ಮಲ್ಯ ಸಮಿತಿ ಮೂಲಕ ಸ್ವಚ್ಛತೆ ಅನುಷ್ಠಾನಕ್ಕೆ ಸರಳ ವಿಧಾನಗಳನ್ನು ಅಳವಡಿಸುವ ಬಗ್ಗೆ ಮತ್ತು ತಂಡವಾಗಿ ಕಾರ್ಯನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು. ಇ ಆಡಳಿತ ವ್ಯವಸ್ಥೆ ಸ್ವ-ಸಹಾಯ ಗುಂಪುಗಳ ಕಾರ್ಯನಿರ್ವಹಣೆ ಕುರಿತು ಪಿಡಿಒ ಎ.ಎ. ಅಬ್ದುಲ್ಲಾ ಮಾಹಿತಿ ನೀಡಿದರು. ಈ ಸಂದÀರ್ಭದಲ್ಲಿ ಪಂಚಾಯತಿ ಸದಸ್ಯರಾದ ದೀಪಕ್ ಗಣಪತಿ, ನಿಶಾ ನಾಯ್ಡು, ಲೋಕೇಶ, ಗೋಪಾಲ, ಯೋಗೇಶ್, ಸುಂದರ ಹಾಗೂ ಹಾನಬಾಳು ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ, ಪಿಡಿಒ, ವತ್ಸಲಾ, ಸದಸ್ಯರುಗಳು ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.