ಕೂಡಿಗೆ, ಡಿ. 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯ ಶಿರಂಗಾಲ ಪದವಿಪೂರ್ವ ಕಾಲೇಜಿ ನಲ್ಲಿ ತಾಲೂಕುಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಪ್ರಾಂಶುಪಾಲ ನಾಗರಾಜ್ ಚಾಲನೆ ನೀಡಿದರು.

ದೇವತಾ ಸಮಿತಿ ಕಾರ್ಯದರ್ಶಿ ಲೋಕೇಶ್ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಕೇವಲ ಸಂಘಗಳನ್ನು ರಚನೆ ಮಾಡುವದಲ್ಲದೆ ಇಂಥ ಶಾಲಾ ಮಕ್ಕಳಿಗೆ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳೋದು ಒಳ್ಳೆಯ ಕೆಲಸ ಎಂದರು. ಸಂಪನ್ಮೂಲ ವ್ಯಕ್ತಿ ರಮೇಶ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಗೋಟೆ ಸ್ವಾಸ್ಥ್ಯ ಸಂಕಲ್ಪ ಕಾರ್ಯ ಕ್ರಮದ ಕುರಿತು ಮಾಹಿತಿ ನೀಡಿದರು.

ದೇವತಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ತಾಲೂಕಿನ ಯೋಜ ನಾಧಿಕಾರಿ ಪ್ರಕಾಶ್ ವೈ ಧರ್ಮಸ್ಥಳ ಯೋಜನೆಯಿಂದ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಪ್ರತೀ ವರ್ಷ ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಲು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ ಎಂದರು.

ವಲಯದ ಮೇಲ್ವಿಚಾರಕ ಕೆ. ವಿನೋದ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಬ್ಬಾಲೆ ವಲಯದಲ್ಲಿ ಆರ್ಥಿಕ ವರ್ಷದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಶಿರಂಗಾಲ ಕಾಲೇಜಿನಲ್ಲಿ ಹಮ್ಮಿಗೊಳ್ಳಲಾಗಿತ್ತು. ಉಪನ್ಯಾಸಕರಾದ ಭವಾನಿ, ಕಾವ್ಯ, ಗಣೇಶ್ ಸೇವಾಪ್ರತಿನಿಧಿ ತಾರಾಮಣಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಉಪನ್ಯಾಸಕಿ ಕಾವ್ಯ ನಿರೂಪಿಸಿದರು.