ಕೂಡಿಗೆ, ಡಿ. 14: ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಿವೃತ್ತ ಕಾರ್ಯಪಾಲಕ ಜಿ.ಎಲ್. ರಾಮಪ್ಪ ಅಧ್ಯಕ್ಷತೆಯಲ್ಲಿ ಕಾಲೇಜು ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ನಿವೃತ್ತ ಪಾಲಿಟೆಕ್ನಿಕ್ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಅವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡುವದರ ಜೊತೆಗೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಗುರುವಂದನಾ ಕಾರ್ಯಕ್ರಮವನ್ನು ಮುಂದಿನ 2019ರ ಫೆಬ್ರವರಿ ತಿಂಗಳಿನಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಸದರಿ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಶಿಕ್ಷಕರು ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ಇದಲ್ಲದೇ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆಗಳನ್ನು ನಡೆಸಲಾಯಿತು.

ಸಭೆಯನ್ನು ಉಪನ್ಯಾಸಕ ಧರ್ಮಪ್ಪ ಸ್ವಾಗತಿಸಿ, ಲೋಕೇಶ್ ವಂದಿಸಿದರು. ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಹೆಚ್.ಸಿ. ರಮೇಶ್, ಕಾರ್ಯದರ್ಶಿ ಹೆಚ್.ಆರ್. ನಾಗೇಶ್, ನಿರ್ದೇಶಕರುಗಳಾದ ಹೆಚ್. ಸುಂದರ್, ಹೆಚ್. ವೆಂಕಟೇಶ್, ಹೆಚ್.ಡಿ. ನಿಂಗರಾಜು, ಉದ್ಯಮಿ ಹೆಚ್.ಕೆ. ಪ್ರಸನ್ನ, ಹಿರಿಯ ವಿದ್ಯಾರ್ಥಿಗಳಾದ ಎಂ.ಎನ್. ಮೂರ್ತಿ, ರಾಮಶೆಟ್ಟಿ, ಹೆಚ್.ಸಿ. ನಿಂಗಪ್ಪ, ಕೆ.ಬಿ. ಉಮೇಶ್, ಕಣಿವೆ ಸುರೇಶ್, ಹೆಚ್.ಎಸ್. ರಘು, ಹೆಚ್.ಎಸ್. ಲೋಕೇಶ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.