ಮಡಿಕೇರಿ, ಡಿ. 14: ಸಮಗ್ರ ಶಿಕ್ಷಣ ಅಭಿಯಾನದಡಿ ಇಲ್ಲಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರತಿ ಶಾಲೆಯ 1 ರಿಂದ 10ನೇ ತರಗತಿ ವರೆಗಿನ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಯನ್ನು ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ್ ನೆರವೇರಿಸಿದರು. ಬಿ.ಐ.ಆರ್.ಟಿ., ಬಿ.ಆರ್.ಪಿ., ಸಿ.ಆರ್.ಪಿ., ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರು ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಯ ಯಶಸ್ಸಿಗೆ ಕಾರಣರಾಗಿದ್ದರು. ವಿದ್ಯಾರ್ಥಿಗಳನ್ನು 1-5, 6-8 ಮತ್ತು 9-10ನೇ ತರಗತಿಗಳಲ್ಲಿ 3 ವಿಭಾಗಗಳಾಗಿ ಪರಿಗಣಿಸಲಾಯಿತು. ಸ್ಪರ್ಧೆಗಳು ಛದ್ಮವೇಷ, ಹಾಡುಗಾರಿಕೆ, ಮಿಠಾಯಿ ಹೆಕ್ಕುವದು, ಚೆಂಡು ಬಕೆಟ್‍ಗೆ ಬಾಲ್ ಹಾಕುವದು ಸೇರಿದಂತೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ತಾಲೂಕಿ ನಾದ್ಯಂತ 70 ಮಕ್ಕಳು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ನಗದು ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು.

ವಿಶೇಷಚೇತನ ದಿನಾಚರಣೆ ಕಾರ್ಯಕ್ರಮ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ವಹಿಸಿದ್ದರು. ಎಸ್. ಮಚ್ಚಾಡೋ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಹಾಗೂ ಗಾಯತ್ರಿ ಉಪಸ್ಥಿತರಿದ್ದರು.

ಪೋಷಕರಿಗೆ ವಿಶ್ವ ವಿಕಲ ದಿನಾಚರಣೆಯ ಮಹತ್ವವನ್ನು ಮತ್ತು ವಿಶೇಷಚೇತನ ಮಕ್ಕಳ ಪಾಲನೆ - ಪೋಷಣೆ ಕುರಿತಂತೆ ಬಿ.ಐ.ಆರ್.ಟಿ. ಶಾಂತ ತರಬೇತಿ ನೀಡಿದರು.

ಬಿ.ಐ.ಆರ್.ಟಿ. ವೀಣಾ ಮಕ್ಕಳ ಪೋಷಕರ ನಿರೀಕ್ಷೆಗಳು ಮತ್ತು ಅವುಗಳನ್ನು ಸಾಧಿಸುವ ಕುರಿತಂತೆ ಪೋಷಕರೊಂದಿಗೆ ಸಮಗ್ರವಾಗಿ ಚರ್ಚಿಸಿದರು. ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತಂತೆ ಶಿಕ್ಷಕ ಮಲ್ಲಿಕಾರ್ಜುನ ಮಾಹಿತಿ ನೀಡಿದರು. ತಾಲೂಕು ಹಂತದಲ್ಲಿ ವಿಜೇತರಾದ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.