ಮಡಿಕೇರಿ, ಡಿ. 14: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿ.ಎಸ್.ಟಿ) 2018-19ನೇ ಸಾಲಿನ ‘ವಿಜ್ಞಾನ ಮತ್ತು ಇಂಜಿನಿಯರಿಂಗ್ನಲ್ಲಿ ಪಿ.ಎಚ್.ಡಿ. ಸಂಶೋಧನೆಗೆ ಡಿ.ಎಸ್.ಟಿ. ಶಿಷ್ಯವೇತನ ಎಂಬ ನೂತನ ಕಾರ್ಯಕ್ರಮಕ್ಕೆ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ರಾಜ್ಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಸಂಸ್ಥೆ, ಕಾಲೇಜುಗಳಲ್ಲಿ ಪಿಎಚ್ಡಿ ಪದವಿಗೆ ಈಗಾಗಲೇ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಈ ಯೋಜನೆಯಡಿ ನೀಡಲಾಗುವ ಶಿಷ್ಯವೇತನದ ಮೊತ್ತವನ್ನು ರೂ. 3 ಸಾವಿರಗಳಿಂದ ರೂ. 20 ಸಾವಿರಗಳಿಗೆ ಪರಿಷ್ಕøತವಾಗಿರುವದರಿಂದ ಅರ್ಜಿ ಸಲ್ಲಿಸಲು ತಾ. 15 ರವರೆಗೆ ವಿಸ್ತರಿಸಲಾಗಿದೆ ಎಂದು ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರು, ವಿಶೇಷ ನಿರ್ದೇಶಕರು ತಿಳಿಸಿದ್ದಾರೆ.