ಮಡಿಕೇರಿ, ಡಿ. 14: ತಾಲೂಕು ಜಾನಪದ ಪರಿಷತ್ ವತಿಯಿಂದ ಭಾರತೀಯ ವಿದ್ಯಾಭವನ ಕೊಡಗು ಘಟಕ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಡಗು ಇವರ ಸಹಯೋಗದಲ್ಲಿ ತಾ 15 ರಂದು (ಇಂದು) ಬೆಳಗ್ಗೆ 10 ಗಂಟೆಗೆ ನಗರದ ಓಂಕಾರೇಶ್ವರ ದೇವಾಲಯ ಬಳಿಯಲ್ಲಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ತಾಲೂಕು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ ತಿಳಿಸಿದ್ದಾರೆ. ಮಡಿಕೇರಿ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಂದ 1 ರಿಂದ 4, 5 ರಿಂದ 7 ಮತ್ತು 8 ರಿಂದ 10 ನೇ ತರಗತಿ ವಿಭಾಗಗಳಲ್ಲಿ ಜಾನಪದ ನೃತ್ಯ ಜರುಗಲಿದೆ.