ಮಡಿಕೇರಿ, ಡಿ.14 : ಕಳೆದ ಇಪ್ಪತ್ತು ವರ್ಷಗಳಿಂದ ಕೊಡಗಿನ ಗಡಿ ಗ್ರಾಮ ಕರಿಕೆಯನ್ನು ಎಲ್ಲಾ ಆಡಳಿತ ವ್ಯವಸ್ಥೆಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ತಾ. 30ರ ಒಳಗೆ ರಸ್ತೆ ಮತ್ತು ಆರೋಗ್ಯ ಕೇಂದ್ರÀ್ರದ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಸೂಕ್ತ ಭರವಸೆ ದೊರೆಯದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದಾರೆ ಎಂದು ‘ನಾವು ಕರಿಕೆ’ ಸಂಘಟನೆಯ ಪ್ರಮುಖ, ಪಂಚಾಯಿತಿ ಸದಸ್ಯ ಬಿ.ಎಸ್.ರಮಾನಾಥ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿ ಗ್ರಾಮ ಎನ್ನುವ ಕಾರಣಕ್ಕಾಗಿ ಗ್ರಾಮವನ್ನು ಮತ್ತು ಗ್ರಾಮಸ್ಥರ ಬೇಡಿಕೆಗಳನ್ನು ನಿರ್ಲಕ್ಷಿ ಸುತ್ತಲೆ ಬರಲಾಗಿದ್ದು, ಯಾವದೇ ಸರ್ಕಾರ ಮೂಲಭೂತ ಸೌಲಭ್ಯವನ್ನು ಒದಗಿಸಲು ಪ್ರಾಮಾಣಿಕ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದರು. ಪಕ್ಷಾತೀತವಾಗಿ ಗ್ರಾಮಸ್ಥರೆಲ್ಲ ಒಗ್ಗೂಡಿ ಹೋರಾಟ ನಡೆಸಬೇಕೆನ್ನುವ ಉದ್ದೇಶದಿಂದ ‘ನಾವು ಕರಿಕೆ’ ಎನ್ನುವ ಸಂಘಟನೆಯನ್ನು ರಚಿಸಿದ್ದು, ಕರಿಕೆ ಗ್ರಾ.ಪಂ. ಅಧ್ಯಕ್ಷÀ ಎನ್. ಬಾಲಚಂದ್ರ ನಾಯರ್ ಅವರೇ ಅಧ್ಯಕ್ಷರಾಗಿರುತ್ತಾರೆ ಎಂದರು.

ಕರಿಕೆ, ಭಾಗಮಂಡಲ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಮಡಿಕೇರಿಯಿಂದ 68 ಕಿ.ಮೀ. ದೂರದಲ್ಲಿರುವ ಕರಿಕೆ ಗ್ರಾಮಕ್ಕೆ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಕೇವಲ 22 ಕಿ.ಮೀ. ದೂರದಲ್ಲಿದೆ. ಪ್ರಕೃತಿ ವಿಕೋಪದ ಸಂದರ್ಭ ಹೆದ್ದಾರಿ ಬಂದ್ ಆಗಿ ಅಂತರ ರಾಜ್ಯ ಮಾರ್ಗ ಕರಿಕೆ- ಭಾಗಮಂಡಲ ಮುಖ್ಯ ರಸ್ತೆ ಮೂಲಕವೇ ವಾಹನಗಳು ಓಡಾಡಿವೆ. ಭಾರೀ ವಾಹನಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರುವ ಈ ರಸ್ತೆಯು ತಲಕಾವೇರಿ ಮತ್ತು ಎಮ್ಮೆಮಾಡು ಕ್ಷೇತ್ರಗಳಿಗೂ ಸಂಪರ್ಕ ಕಲ್ಪಿಸುವದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕೆಂದು ರಮಾನಾಥ್ ಒತ್ತಾಯಿಸಿದರು.

ಸುಮಾರು 6 ಸಾವಿರ ಜನಸಂಖ್ಯೆ ಇರುವ ಕರಿಕೆ ಗ್ರಾಮ 30 ಕಿ.ಮೀ. ದೂರದಲ್ಲಿರುವ ಭಾಗಮಂಡಲದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೆ ಅವಲಂಬಿಸಬೇಕಾಗಿದ್ದು, ಸುಗಮ ಸಂಚಾರದ ಕೊರತೆಯಿಂದ ರೋಗಿ ಗಳಿಗೂ ಅಡಚಣೆ ಎದುರಾಗುತ್ತಿದೆ. ಕರಿಕೆಯಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಬೇಕೆನ್ನುವ ಬೆÉೀಡಿಕೆಯಂತೆ ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಆರೋಗ್ಯ ಕೇಂದ್ರ ಮಂಜೂರಾಗಿದ್ದರೂ ಇಲ್ಲಿಯವರೆಗೆ ಆರಂಭಗೊಂಡಿಲ್ಲ. ತಕ್ಷಣ ಆರೋಗ್ಯ

(ಮೊದಲ ಪುಟದಿಂದ) ಕೇಂದ್ರ್ರವನ್ನು ಸ್ಥಾಪಿಸಿ ಪೂರ್ಣ ಪ್ರಮಾಣದ ವೈದ್ಯರು, ಸಿಬ್ಬಂದಿ ಮತ್ತು ಅಗತ್ಯ ಔಷಧ ಪೂರೈಕೆಯನ್ನು ಮಾಡಬೇಕೆಂದು ಒತ್ತಾಯಿಸಿದ ರಮಾನಾಥ್, ಕರಿಕೆ ಗ್ರಾಮವನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವದರಿಂದ ನೊಂದಿರುವ ಸ್ಥಳೀಯ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಗ್ರಾಮ ಕೇರಳ ರಾಜ್ಯಕ್ಕೆ ಸೇರ್ಪಡೆಗೊಳ್ಳಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಆಶ್ಚರ್ಯವಿಲ್ಲ ಎಂದರು.

ನಾವು ಕರಿಕೆ ಸಂಘಟನೆಯ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಮಾತನಾಡಿ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕರಿಕೆ ಗ್ರಾಮಸ್ಥರು ಭಾವನಾತ್ಮಕವಾಗಿ ದೂರವಾಗುತ್ತಿದ್ದು, ಪ್ರತ್ಯೇಕತೆಯ ಕೂಗು ಕೇಳಿ ಬರಬಹು ದೆಂದು ಬೆÉೀಸರ ವ್ಯಕ್ತಪಡಿಸಿದರು. ತಕ್ಷಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಬೇಕಲ್ ಜೆ.ಶರಣ್ ಕುಮಾರ್, ಬಿ.ಕೆ.ಪುರುಷೋತ್ತಮ ಹಾಗೂ ಪವಿತ್ರಕುಮಾರ್ ಹೊದ್ದೆಟ್ಟಿ ಉಪಸ್ಥಿತರಿದ್ದರು.