ವೀರಾಜಪೇಟೆ, ಡಿ. 14: ಕಾಕೋಟುಪರಂಬು ಕಾಲ ಭೈರವ ದೇವಸ್ಥಾನದ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಕಾಲಭೈರವ ದೇವರ ಉತ್ಸವವನ್ನು ತಾ15 ರಿಂದ (ಇಂದಿನಿಂದ) 17 ರವರಗೆ ಆಚರಿಸಲಾಗುವದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ತಾ.15ರಂದು ಮರತೆರ, ತಾ. 16ರಂದು ದೊಡ್ಡಹಬ್ಬ, ತಾ. 17ರಂದು ಬೇತರಿ ಗ್ರಾಮದ ಕಾವೇರಿ ಹೊಳೆಯಲ್ಲಿ ಸಾಂಪ್ರದಾಯಿಕ ಬದ್ಧವಾಗಿ ದೇವರ ಜಳಕ ನಡೆಯಲಿದೆ.