ಮಡಿಕೇರಿ, ಡಿ. 14: ಅಭಿವೃದ್ದಿಗೆ ಪೂರಕವಾದ ಸಾರ್ವಜನಿಕರಿಗೆ ಅನುಕೂಲವಾದ ಸೋಮವಾರಪೇಟೆ ತಾಲೂಕಿನ ಜನತೆಯ ನಿರೀಕ್ಷೆಯಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ಕಳೆದ ಕೆಲವು ವರ್ಷಗಳ ಹಿಂದೆ ಕುಶಾಲನಗರ ಸಮೀಪ ಬಸವನಹಳ್ಳಿ ಗ್ರಾಮದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅದಕ್ಕೆ 4 ಎಕರೆ ಭೂಮಿಯನ್ನು ಕಾಯ್ದಿರಿಸುವಂತೆ ಮಾಡಿದ್ದರು.

ಇದೀಗ ಬದಲಾದ ಸರ್ಕಾರಗಳ ನಡುವೆ ಶ್ರಮವಹಿಸಿ ರಾಜ್ಯ ಸರ್ಕಾರದಿಂದ ಕೆಎಸ್‍ಆರ್‍ಟಿಸಿ ಜಾಗ ಸ್ಥಳಾಂತರಿಸಿ ಕೂಡಲೆ ಡಿಪೋ ಮಾಡಲು ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.