ಕೂಡಿಗೆ, ಡಿ. 14: ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ಪ್ರಯುಕ್ತ ಪ್ರದೀಶ್, ರವಿ, ಜ್ಞಾಪಕಾರ್ಥವಾಗಿ ಪ್ರಥಮ ವರ್ಷದ ಮುಕ್ತ ಟೆನ್ನಿಸ್ ಬಾಲ್ ಪಂದ್ಯಾವಳಿ ಕೂಡಿಗೆಯ ಡಯಟ್ ಮೈದಾನದಲ್ಲಿ ನಡೆಯಿತು.

ಪಂದ್ಯಾವಳಿಯಲ್ಲಿ ಪಿ.ಆರ್. ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದು ಪ್ರಥಮ ಬಹುಮಾನ ರೂ. 22,222 ಹಾಗೂ ಟ್ರೋಫಿ ತನ್ನದಾಗಿಸಿ ಕೊಂಡಿತು. ದ್ವಿತೀಯ ಬಹುಮಾನ ವನ್ನು ಅಪ್ಪಚ್ಚು ಫ್ರೆಂಡ್ಸ್ ತಂಡ ಗಳಿಸಿ, ರೂ. 11,111 ಹಾಗೂ ಟ್ರೋಫಿ ಗಳಿಸಿಗೊಂಡಿತು.

ಬೆಸ್ಟ್ ಬ್ಯಾಟ್ಸ್‍ಮನ್ ಆಗಿ ಅಪ್ಪಚ್ಚು ತಂಡದ ಸುಲ್‍ಮಾನ್, ಬೆಸ್ಟ್ ಬೌಲರ್ ಶಿವು, ಉತ್ತಮ ಫೀಲ್ಡರ್ ಅಗಿ ಅಶ್ವತ್, ಮ್ಯಾನ್ ಆಫ್ ಸೀರಿಸ್ ಆಗಿ ಗೌರಿಯ ಪಡೆದುಕೊಂಡರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೀಲಾಕೃಷ್ಣ ವಹಿಸಿದರು. ಮುಖ್ಯ ಅತಿಥಿಗಳಾಗಿ ಮಂಜು, ಕೃಷ್ಣ, ರಾಜು, ಪ್ರದೀಪ್ ಮತ್ತು ರವಿ ತಂದೆ-ತಾಯಿಗಳು ಹಾಗೂ ಪಿ.ಆರ್. ಫ್ರೆಂಡ್ಸ್‍ನ ಅಧ್ಯಕ್ಷರುಗಳು ಹಾಗೂ ಎಲ್ಲಾ ಪದಾಧಿಕಾರಿ ಸೇರಿದಂತೆ ಪ್ರಮುಖರು ಹಾಜರಿದ್ದರು. ಪಂದ್ಯಾಟದ ಉದ್ಘಾಟನೆಯನ್ನು ಕೂಡಿಗೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ.ಸಿ. ರಾಜು ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಲಿಂಗಯ್ಯ ನೆರವೇರಿಸಿದರು.