ಮಡಿಕೇರಿ, ಡಿ. 14: 1963ರ ಕರ್ನಾಟಕ ಅರಣ್ಯ ಕಾಯಿದೆ ವಿಧಿ 71 ಎ ಪ್ರಕಾರ ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾದ ವಾಹನಗಳನ್ನು ಬಹಿರಂಗ ಟೆಂಡರ್ ಕಂ ಹರಾಜು ಮಾಡಲು ತಾ. 13 ರಂದು ಬೆಳಿಗ್ಗೆ 11 ಗಂಟೆಗೆ ದಿನಾಂಕ ನಿಗದಿಪಡಿಸಿದ್ದು, ಕಾರಣಾಂತರಗಳಿಂದ ಈ ಟೆಂಡರ್ ಕಂ ಹರಾಜನ್ನು ತಾ. 27 ರಂದು ಬೆಳಿಗ್ಗೆ 11 ಗಂಟೆಗೆ ನಡೆಸಲಾಗುವದು. ಹೆಚ್ಚಿನ ವಿವರಗಳಿಗೆ ಈ ಕಚೇರಿ ಹಾಗೂ ವಲಯ ಅರಣ್ಯಾಧಿಕಾರಿ ಕುಶಾಲನಗರ ವಲಯ ಕುಶಾಲನಗರ ಇವರನ್ನು ಹಾಗೂ ದೂ.ಸಂ: 08272-228305, 08276-298223 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೋರಿದ್ದಾರೆ.