ಮಡಿಕೇರಿ, ಡಿ. 14: ಪ್ರತಿಯೊಬ್ಬ ದಲಿತರು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಒಂದಾಗಬೇಕು ಎಂದು ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್ ಕರೆ ನೀಡಿದರು. ನಗರದ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ರತ್ನ ಡಾ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಎಸ್‍ಪಿ ರಾಜ್ಯ ಮುಖಂಡ ಪ್ರೇಮ್‍ಕುಮಾರ್ ಮಾತನಾಡಿ, ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಅಂಬೇಡ್ಕರ್ ಅವರು ಭಾರತದ ಸಮಸ್ತ ಪ್ರಜೆಗಳನ್ನು ಒಂದುಗೂಡಿಸಿದ ಮಹಾನ್ ಶಕ್ತಿಯಾಗಿದ್ದಾರೆ ಎಂದರು. ಬಿಎಸ್‍ಪಿಯ ಮುಖಂಡ ಮೋಹನ್ ಮೌರ್ಯ ಮಾತನಾಡಿ, ಯಾವದೇ ವಿಜಯೋತ್ಸವಗಳಿಗೆ ಅವಕಾಶ ಕಲ್ಪಿಸಕೂಡದೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿರುವದನ್ನು ಮಾನ್ಯತೆ ಮಾಡಿದ ಜಿಲ್ಲಾಡಳಿತ ಯಾರಿಗೂ, ಯಾವದೇ ವಿಜಯೋತ್ಸವಕ್ಕೆ ಅವಕಾಶ ನೀಡದಿರುವದನ್ನು ಶ್ಲಾಘಿಸಿದರು. ನಂತರ ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದರು.