ಕುಶಾಲನಗರ, ಡಿ. 14: ಜಿಲ್ಲಾಧಿಕಾರಿಗಳು ಗುಂಡೂರಾವ್ ಬಡಾವಣೆಯ ಜಾಗವನ್ನು ನಿರಾಶ್ರಿತರಿಗೆ ನೀಡಲು ತೀರ್ಮಾನಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದ ಹಿನೆÀ್ನಲೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಶಾಲನಗರದ ಪ್ರಮುಖರಿಂದ ಸಭೆ ನಡೆಸಲಾಯಿತು.

ಸಭೆಯಲ್ಲಿ ಸರ್ವಪಕ್ಷದ ಪ್ರಮುಖರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು, ಈ ವಿಚಾರವಾಗಿ ಚರ್ಚೆ ನಡೆಸಿ ಸೋಮವಾರ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವರಿಕೆ ಮಾಡುವದರ ಜೊತೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲು ತೀರ್ಮಾನಿಸಿದರು.

ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರಾದ ರೇಣುಕಾ, ಜಯವರ್ಧನ್ (ಕೇಶವ್), ಅಮೃತ್ ರಾಜ್, ಪ್ರಮೋದ್ ಮುತ್ತಪ್ಪ, ಸುರೇಶ್, ಪಟ್ಟಣದ ಪ್ರಮುಖರಾದ ನರಸಿಂಹ ಮೂರ್ತಿ, ಜಿ.ಎಲ್.ನಾಗರಾಜ್, ಜೋಸೆಫ್ ವಿಕ್ಟರ್ ಸೋನ್ಸ್, ನಂಜುಂಡಸ್ವಾಮಿ, ಕೆ.ಜೆ. ಮನು, ಕೃಷ್ಣ ಹಾಗೂ ಮತ್ತಿತರರು ಹಾಜರಿದ್ದರು.