ಸುಂಟಿಕೊಪ್ಪ, ಡಿ. 14: ಕುಶಾಲನಗರ ಫಾತೀಮಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು 4 ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಡಿಕೇರಿ ಸಂತ ಮೈಕಲರ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕುಶಾಲನಗರದ ಫಾತಿಮಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಹೊನಲ್ ಬಿ. ಡಿಂಪಲ್ ಪ್ರಥಮ, ಆಶುಭಾಷಣದಲ್ಲಿ ಎಂ. ಅನನ್ಯ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಬಿಯಾನ್ ಸೆಲ್ಯೂಟಸ್ ಪ್ರಥಮ, ಉರ್ದು ಧಾರ್ಮಿಕ ಪಠಣದಲ್ಲಿ ಮಹಮ್ಮದ್ ಯೂನಸ್ ಪ್ರಥಮ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.