*ಗೋಣಿಕೊಪ್ಪಲು, ಡಿ. 14: ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕೊಕ್ಕಲೆಮಾಡ ಮುತ್ತಣ್ಣ, ಪಾರುವಂಗಡ ಕಾರ್ಯಪ್ಪ ದತ್ತಿನಿಧಿ ತಾಲೂಕುಮಟ್ಟದ ಪದವಿ ಪೂರ್ವ ಕಾಲೇಜುಗಳ ಭಾವಗೀತೆ ಸ್ಪರ್ಧೆಯಲ್ಲಿ ಅರುವತ್ತೊಕ್ಕಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೃಣಾಲಿನಿ ತಾಮನ್ ಕರ್ ಪ್ರಥಮ ಸ್ಥಾನ ಪಡೆದುಕೊಂಡರು.

ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಕೆ.ಆರ್. ಹೇಮಾ ದ್ವಿತೀಯ, ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಪ್ರಣಿತ ತೃತೀಯ ಸ್ಥಾನ ಗಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಸಂಗೀತ ಮನಸ್ಸನ್ನು ಮುದಗೊಳಿಸತ್ತದೆ.

ಸಂಗೀತ ಮನಸ್ಸನ್ನು ಹಿತಗೊಳಿಸು ವದರ ಜತೆಗೆ ಮಾನಸಿಕ ಆರೋಗ್ಯ ವನ್ನು ವೃದ್ಧಿಗೊಳಿಸುತ್ತದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಂಗೀತ, ಚರ್ಚಾ ಸ್ಪರ್ಧೆಯಲ್ಲಿಯೂ ಪಾಲ್ಗೊಳ್ಳಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತಪ್ರತಿಭೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಕ್ಕಲೆಮಾಡ ಬೊಳ್ಳಮ್ಮ ಮುತ್ತಣ್ಣ, ಪಿ.ಜಿ. ಕಾರ್ಯಪ್ಪ ಅವರ ಕಾರ್ಯಪ್ಪ ಶ್ಲಾಘನೀಯವಾದುದು. ಇದನ್ನು ವಿದ್ಯಾರ್ಥಿಗಳು ಸದುಪ ಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾಸಂಸ್ಥೆಯ ಕೋಶಾಧಿ ಕಾರಿ ಅಡ್ಡೇಂಗಡ ಬಿ. ದೇವಯ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಬಾರ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಉಪನ್ಯಾಸಕಿ ಪ್ರತಿಭಾ ಉತ್ತಪ್ಪ, ಶಿಕ್ಷಕರಾದ ಡಿ.ಎನ್. ಸುಬ್ಬಯ್ಯ, ಎಂ.ಪಿ. ರಾಘವೇಂದ್ರ, ತಿಮ್ಮರಾಜು ಹಾಜರಿದ್ದರು.

- ಎನ್.ಎನ್. ದಿನೇಶ್