ನಾಪೆÇೀಕ್ಲು, ಡಿ. 14: ಭಾಗಮಂಡಲ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿದ್ದ, ಪ್ರಸ್ತುತ ಕರ್ನಾಟಕ ರಾಜ್ಯ ಸಿವಿಲ್ ಪೆÇಲೀಸ್ ಇಲಾಖೆಗೆ ಆಯ್ಕೆಯಾಗಿರುವ ಎನ್.ಎಲ್. ತೇಜಸ್ವಿನಿ ಅವರನ್ನು ಶಾಲಾ ಎಸ್‍ಡಿಎಂಸಿ, ಶಿಕ್ಷಕ ವೃಂದ, ಪೆÇೀಷಕ ವೃಂದದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ, ಮುಖ್ಯ ಶಿಕ್ಷಕ ಎನ್.ಕೆ. ಪ್ರಭು, ಎಸ್.ಎ. ಶೇಖರ್, ಸಹ ಶಿಕ್ಷಕರಾದ ಬಿ.ಪಿ. ಅರುಣ, ಸಿ.ಎಲ್. ಜ್ಯೋತಿ, ಎ.ಕೆ. ಇಂದಿರಾ, ಮತ್ತಿತರರು ಇದ್ದರು.