ವೀರಾಜಪೇಟೆ: ಇತಿಹಾಸ ಪ್ರಸಿದ್ಧ ಮೀನುಪೇಟೆಯ ಶ್ರೀ ಕಾಂಚಿ ಕಾಮಾಕ್ಷಿ ದೇಗುಲದಲ್ಲಿ ಷಷ್ಠಿ ಪೂಜೆ ಆಚರಿಸಲಾಯಿತು. ಆಲಯದ ಆವರಣದ ನಾಗಾಬನದಲ್ಲಿ ಶ್ರೀ ದೇವರಿಗೆ ವಿಶೇಷ ಅಭಿಷೇಕಗಳು ನಡೆಯಿತು. ಉತ್ಸವದ ಅಂಗವಾಗಿ ಶ್ರೀ ದೇವಿಗೆ ಕನಕಭಾರಣಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ತಮ್ಮ ಇಷ್ಟಾರ್ಥಗಳನ್ನು ನೆರವೆರಿಸುವಂತೆ ದೇವರ ಆರ್ಶೀವಾದವನ್ನು ಪಡೆದು ಪುನಿತರಾದರು. ಆಡಳಿತ ಮಂಡಳಿಯ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಷ್ಣು ದುರ್ಗಿ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪೂಜಾ ಮಹೋತ್ಸವ ಆಚರಿಸಲಾಯಿತು. ದೇವಾಲಾಯ ವಿವಿಧ ಹೂವುಗಳಿಂದ ಸಿಂಗರಿಸಲಾಗಿತ್ತು. ಹುತ್ತಕ್ಕೆ ಅಭಿಷೇಕಗಳು ಜರುಗಿದ್ದು ವಿಶೇಷ. ನಾಗಾರಾಧನೆ, ನಾಗ ಪ್ರತಿಷ್ಟೆ ಪೂಜೆ, ಪೂರ್ಣ ಕುಂಭ ಕಲಶದ ಅಭಿಷೇಕಗಳು ದೇವಿಗೆ ವಿಶೇಷ ಸಂಕಲ್ಪ ಪೂಜೆಗಳು ಜರುಗಿದವು. ನಂತರ ಶ್ರೀ ದೇವಿಗೆ ಮಹಾಪೂಜೆ ಜರುಗಿತು. ವಿವಿಧೆಡೆಗಳಿಂದ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಅನುಗ್ರಹ ಪಡೆದರು. ದೇಗುಲದ ಭಕ್ತ ಸಮೂಹದಿಂದ ಅನ್ನಸಂತರ್ಪಣೆ ನಡೆಯಿತು. ಭಕ್ತರು ಪೂಜಾ ಕಾರ್ಯದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.ಕುಶಾಲನಗರ: ಕುಶಾಲನಗರದ ಮಾರುಕಟ್ಟೆ ಆವರಣದ ಶ್ರೀ ನಾಗದೇವತೆ ದೇವಾಲಯದಲ್ಲಿ ಶ್ರೀ ನಾಗದೇವತಾ ಸಮಿತಿ ಆಶ್ರಯದಲ್ಲಿ 11ನೇ ವರ್ಷದ ಸುಬ್ರಮಣ್ಯ ಷಷ್ಠಿ ಸಮಾರಂಭ ಅಂಗವಾಗಿ ಪೂಜಾ ಕಾರ್ಯಕ್ರಮಗಳು ಜರುಗಿದವು.

ಸಾಮೂಹಿಕ ಆಶ್ಲೇಷ ಬಲಿ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಅರ್ಚನೆ ಬಳಿಕ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ದೀಪೋತ್ಸವ ಹಾಗೂ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಪೂಜಾ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ದೇವಾಲಯ, ನಾಗಬನಗಳಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ನಾಗದೇವರಿಗೆ ವಿಶೇಷ ಅಲಂಕಾರ, ಅಷ್ಟೋತ್ತರ, ವಿವಿಧ ಅಭಿಷೇಕಗಳು ನಡೆಯಿತು. ದೇವಾಲಯದ ಅರ್ಚಕ ಪ್ರಸನ್ನಕುಮಾರ್ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.

ಬೆಳಗ್ಗಿನಿಂದ ಉಪವಾಸವಿದ್ದ ಭಕ್ತಾದಿಗಳು ನಾಗದೇವರಿಗೆ ಹಾಲು, ಎಳನೀರು, ಅರಿಶಿಣ ಅಭಿಷೇಕ ಮಾಡಿದರು. ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು.ಒಡೆಯನಪುರ: ಸುಬ್ರಹ್ಮಣಿ ಷಷ್ಠಿ ಪ್ರಯುಕ್ತ ಶನಿವಾರಸಂತೆಯ ಬೀರಲಿಂಗೇಶ್ವರ ಪ್ರಬಲ ಭೈರವಿ ಪರಿವಾರಗಳ ದೇವಾ¯ಯದಲ್ಲಿ ಹಾಗೂ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮತ್ತು ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಿತು. ಬೆಳಗ್ಗೆಯಿಂದ ಭಕ್ತಾದಿಗಳು ದೇವಾಲಯಗಳಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕ ನಾಗೇಶ್, ಮಹಾಂತೇಶ್ ಇವರುಗಳು ಪೂಜಾ ಕಾರ್ಯವನ್ನು ನೆರವೇರಿಸಿದರು. ಒಡೆಯನಪುರ ಗ್ರಾಮದಲ್ಲಿ ನಡೆದ ಷಷ್ಠಿ ಸಂಭ್ರಮದಲ್ಲಿ ಚಿಕ್ಕ ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ತೆರಳಿ ಹಬ್ಬದ ಪ್ರಯುಕ್ತ ವಿವಿಧ ತರಕಾರಿಗಳನ್ನು ವಿತರಿಸಿದರು.ನಾಪೋಕ್ಲು: ವಿವಿಧೆಡೆ ಷಷ್ಠಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನೆಲಜಿ ಇಗ್ಗುತ್ತಪ್ಪ, ಪಾಲೂರು ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ಪೂಜೆಗಳು ಜರುಗಿದವು. ಇಲ್ಲಿಗೆ ಸಮೀಪದ ಕಕ್ಕುಂದಕಾಡು ವೆಂಕಟೇಶ್ವರ ದೇವಾಲಯದಲ್ಲಿ ಷಷ್ಠಿ ಹಬ್ಬದ ಪ್ರಯುಕ್ತ ಆಶ್ಲೇಷ ಪೂಜೆ ಮತ್ತು ಗಣಹೋಮ ಜರುಗಿದವು. ಮಹಾಪೂಜೆಯಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದ ಅರ್ಚಕ ರಾಘವೇಂದ್ರ ಭಟ್ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿದರು.