ನಾಪೋಕ್ಲು, ಡಿ. 14: ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮೂರ್ನಾಡಿನ ಕ್ಲೀನ್ ಕೂರ್ಗ್ ಇನ್ಸ್ಪೈಯರ್ (ಸಿಸಿಐ) ಮುಂದಾ ಳತ್ವದಲ್ಲಿ ವೀರಾಜಪೇಟೆ, ಮೂರ್ನಾಡು, ನಾಪೋಕ್ಲು ಲಯನ್ಸ್ ಕ್ಲಬ್, ಮೂರ್ನಾಡು ಮಾರುತಿ ಪದವಿ ಪೂರ್ವ ಕಾಲೇಜು ಹಾಗೂ ಪಿಪಿ ಫೌಂಡೇಶನ್ ಸಹಯೋಗದೊಂದಿಗೆ ನಾಪೋಕ್ಲುವಿನಲ್ಲಿ ಸೈಕಲ್ ಜಾಥಾ ಅಭಿಯಾನವನ್ನು ಹಮ್ಮಿ ಕೊಳ್ಳಲಾಯಿತು. ಮೂರ್ನಾಡಿನಿಂದ ಹೊರಟ ಸೈಕಲ್ ಜಾಥಾವನ್ನು ನಾಪೋಕ್ಲು ಸಂತೆ ಮೈದಾನದಲ್ಲಿ ಸ್ಥಳೀಯ ಪ್ರಮುಖರು ಬರಮಾಡಿ ಕೊಂಡರು. ಬಳಿಕ ಪಟ್ಟಣದಲ್ಲಿ ಪರಿಸರ ಜಾಗೃತಿ ಘೋಷಣೆಗಳೊಂದಿಗೆ ಜಾಥಾ ನಡೆಸಲಾಯಿತು. ನಂತರ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಸಿಐ ಪ್ರಮುಖ ಬಡುವಂಡ ಅರುಣ್ ಅಪ್ಪಚ್ಚು, ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್, ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ, ಪಿಪಿ ಫೌಂಡೇಶನ್ನ ಯಂ.ಯಸ್. ಸಲೀಂ ಪರಿಸರ ಜಾಗೃತಿ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಬೊಪ್ಪಂಡ ಜಾಲಿ ಬೊಪಯ್ಯ ವಹಿಸಿದ್ದು, ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿವೃತ್ತ ಪ್ರಾಂಶು ಪಾಲ ಕಲ್ಯಾಟಂಡ ಪೂಣಚ್ಚ, ಪ್ರಾಂಶು ಪಾಲೆ ಶಾರದಾ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.