*ಗೋಣಿಕೊಪ್ಪಲಿ, ಡಿ. 14: ಅನಧಿಕೃತವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಮಿನಿ ಲಾರಿಗಳನ್ನು ಗೋಣಿಕೊಪ್ಪಲು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾತೂತು - ಕುಂದ ರಸ್ತೆಯಲ್ಲಿ ಈ ಪ್ರಕರಣ ಪತ್ತೆಯಾಗಿದ್ದು, ತಾ. 13ರ ಬೆಳಗ್ಗಿನ ಜಾವ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವೀರಾಜಪೇಟೆಯ ಅನಿಲ್ ಎಂಬವರಿಗೆ ಸೇರಿರುವ ಲಾರಿ ಇದೆನ್ನಲಾಗಿದ್ದು, ಫಾರೂಕ್, ಮುತ್ತಪ್ಪ, ಜೀವನ್ ಎಂಬವರನ್ನು ಬಂಧಿಸಲಾಗಿದೆ. ಗೋಣಿಕೊಪ್ಪ ಉಪ ನಿರೀಕ್ಷಕ ಶ್ರೀಧರ್, ಸಹಾಯಕ ಉಪ ನಿರೀಕ್ಷಕ ಮಾದಯ್ಯ, ಸಿಬ್ಬಂದಿಗಳಾದ ಶೇಖರ್, ಮಂಜುನಾಥ್, ಪೂವಣ್ಣ, ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.