ಸೋಮವಾರಪೇಟೆ, ಡಿ. 14: ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬೋಧನೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನ ಮೃತ ಮಹಿಳೆಯೋರ್ವರ ದೇಹವನ್ನು ಕುಟುಂಬಸ್ಥರು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನ ಮಾಡಿದ್ದಾರೆ.
ಕಳೆದ ತಾ. 10ರಂದು ನಿಧನರಾದ ಶಾಂತವೇರಿ-ನಂದಿಗುಂದ ಗ್ರಾಮದ ಸೋಮೇಶ್ ಅವರ ಪತ್ನಿ ರಾಜಶ್ರೀ (52) ಅವರ ಮೃತದೇಹವನ್ನು ಕುಟುಂಬಸ್ಥರು ಹಾಸನ ಕಾಲೇಜಿಗೆ ದಾನ ನೀಡಿದ್ದು, ಅಲ್ಲಿನ ವಿದ್ಯಾರ್ಥಿಗಳ ಪ್ರಾಯೋಗಿಕ ಬೋಧನೆಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ ಎಂದು ಕಾಲೇಜಿನ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎಸ್. ಪ್ರಕಾಶ್ ತಿಳಿಸಿದ್ದಾರೆ.
ಮೃತದೇಹವನ್ನು ಹಾಸನಕ್ಕೆ ಸಾಗಿಸಲು ಸೋಮವಾರಪೇಟೆ ಲಯನ್ಸ್ ಸಂಸ್ಥೆಯಿಂದ ಉಚಿತವಾಗಿ ಶವಪೆಟ್ಟಿಗೆಯನ್ನು ನೀಡಿ ಸಹಕರಿಸಿದ್ದಾರೆ.