ಸೋಮವಾರಪೇಟೆ, ಡಿ. 14: ಕಳೆದ 2 ತಿಂಗಳಿನಿಂದ ಠಾಣಾಧಿಕಾರಿ ಇಲ್ಲದೇ ಕಾನೂನು ಸುವ್ಯವಸ್ಥೆಯ ಕಟ್ಟುನಿಟ್ಟಿನ ಪಾಲನೆಗೆ ತೊಡಕಾಗಿದ್ದ ಸೋಮವಾರಪೇಟೆ ಠಾಣೆಗೆ ನೂತನ ಎಸ್.ಐ. ಆಗಿ ಮೂಲತಃ ಮೈಸೂರಿನ ಶಿವಶಂಕರ್ ನೇಮಕಗೊಂಡಿದ್ದಾರೆ.
ಸದ್ಯ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಶಂಕರ್ ಅವರನ್ನು ಇಲಾಖೆ, ಸೋಮವಾರಪೇಟೆಗೆ ನಿಯೋಜಿಸಿದ್ದು, ಠಾಣಾ ವ್ಯಾಪ್ತಿಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಿ, ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವದು ಎಂದು ನೂತನ ಎಸ್.ಐ. ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಇಲ್ಲಿನ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಶಿವಣ್ಣ ಅವರು ಅಕ್ಟೋಬರ್ 1 ರಂದು ಚಾಮರಾಜನಗರಕ್ಕೆ ವರ್ಗವಾಗಿದ್ದರು. ಸುಮಾರು 2 ತಿಂಗಳ ಕಾಲ ಠಾಣಾಧಿಕಾರಿಯ ನೇಮಕ ಆಗಿರಲಿಲ್ಲ.