ಗೋಣಿಕೊಪ್ಪ ವರದಿ, ಡಿ. 14: ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ವತಿಯಿಂದ ಜಿಲ್ಲಾ ಶಾಲಾ ಮಟ್ಟದ ಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‍ಶಿಪ್ ಕಾಲ್ಸ್ ಶಾಲಾ ಮೈದಾನದಲ್ಲಿ ತಾ. 20 ಹಾಗೂ 21 ರಂದು ನಡೆಯಲಿದೆ ಎಂದು ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ ತಿಳಿಸಿದ್ದಾರೆ.

12, 14 ಹಾಗೂ 16 ವಯೋಮಿತಿಯ ಬಾಲಕ, ಬಾಲಕಿಯರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕಾಗಿದೆ. ಉತ್ತಮ ಪ್ರತಿಭೆಯನ್ನು ಅಶ್ವಿನಿ ಫೌಂಡೇಷನ್ ವತಿಯಿಂದ ಪ್ರೋತ್ಸಾಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಮೊದಲ ಬಾರಿಗೆ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಅನುಭವ ಪಡೆಯುವ ಮೂಲಕ ಉತ್ತಮ ಕ್ರೀಡಾಪಟುಗಳಿಗೆ ಅಡಿಪಾಯ ಹಾಕಲು ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೋಷಕರು ಹಾಗೂ ಶಾಲಾ ಶಿಕ್ಷಕರು ಈ ಚಾಂಪಿಯನ್‍ಶಿಪ್‍ನ್ನು ವಿಶೇಷವಾಗಿ ಪರಿಗಣಿಸಬೇಕು. ಲಾಂಗ್‍ಜಂಪ್, 100 ಮೀ. ಹರ್ಡಲ್ಸ್, 16 ವಯೋಮಿತಿಯವರಿಗೆ 100, 200, 400, 800, 1,500, ಶಾಟ್‍ಪುಟ್, ಡಿಸ್ಕಸ್, ಹೈಜಂಪ್, ಲಾಂಗ್‍ಜಂಪ್, 100 ಮೀ. ಹರ್ಡಲ್ಸ್, 4x100 ರಿಲೇ ಸ್ಪರ್ಧೆಗಳು ನಡೆಯಲಿವೆ.

ಗೋಷ್ಠಿಯಲ್ಲಿ ಪ್ರಾಂಶುಪಾಲೆ ಬಾಚೇಟೀರ ಗೌರಮ್ಮ ನಂಜಪ್ಪ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ 08274-456, 9449335090 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.ತಮ್ಮ ಮಕ್ಕಳಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕಿದೆ. ತಾ. 17 ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕಿದೆ ಎಂದರು. ಹುಟ್ಟಿದ ದಿನಾಂಕ ದೃಢೀಕರಣ ಪತ್ರ ತರಬೇಕಾಗಿದೆ. ವಯೋಮಿತಿಗೆ ಅನುಗುಣವಾಗಿ ಓಟ, ಶಾಟ್‍ಪುಟ್, ಲಾಂಗ್‍ಜಂಪ್, ಡಿಸ್ಕಸ್, ಹರ್ಡಲ್ಸ್ ರಿಲೇ ಸ್ಪರ್ಧೆಗಳು ನಡೆಯಲಿವೆ. 12 ವಯೋಮಿತಿಯವರು 1.12.2006, 14 ವಯೋಮಿತಿಯವರು 1.12.2004, 16 ವಯೋಮಿತಿಯವರು 1.12.2002 ರಲ್ಲಿ ಅಥವಾ ಆ ದಿನಾಂಕದ ನಂತರ ಜನಿಸಿದವರಾಗಿರಬೇಕು.