ಶ್ರೀಮಂಗಲ, ಡಿ. 14: ಐತಿಹಾಸಿಕ ಹರಿಹರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ಷಷ್ಠಿ ಉತ್ಸವ ಪ್ರಯುಕ್ತ ಸಾವಿ ರಾರು ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿಯೂ ಉತ್ಸವ ಪ್ರಯುಕ್ತ ವಿಶೇಷ ಧಾರ್ಮಿಕ ಕೈಂಕರ್ಯಗಳು ನಡೆದವು. ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಹರಿಹರ ದೇವಸ್ಥಾನ ವಿಶೇಷತೆ ಪಡೆದಿದ್ದು, ಇಷ್ಟಾರ್ಥ ಈಡೇರಿಕೆಗಾಗಿ, ಕಷ್ಟ ಮುಕ್ತಿಗಾಗಿ ಹೆಚ್ಚಿನ ಭಕ್ತಾದಿಗಳು ಈ ದೇವಾಲಯದಲ್ಲಿ ನಂಬಿಕೆಯಿಂದ ಹರಿಕೆ, ಪೂಜೆ ಸಲ್ಲಿಸಿದರು.

ಷಷ್ಠಿ ಪ್ರಯುಕ್ತ ಗುರುವಾರ ದಿಂದಲೇ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಕ್ತಾದಿಗಳು ದೇವರ ದರ್ಶನ ಪಡೆದರು. ತಲೆ ಮುಡಿ ಹರಕೆ, ನಾಗದೋಷ ಪರಿಹಾರ ಹರಕೆ, ರುದ್ರಾ ಭಿಷೇಕ, ಕ್ಷೀರಾಭಿಷೆಕ, ತುಲಾಭಾರ, ಸಾಂಪ್ರದಾಯಿಕ ಎತ್ತ್ ಮಂಗಲ, ವಸಂತ ಪೂಜೆ, ದೇವರ ಅವಬ್ರತ ಸ್ನಾನ, ಉತ್ತಮ ಶಿವ ಮೂರ್ತಿ ಪ್ರದಕ್ಷಿಣೆ ಸೇರಿದಂತೆ ಉತ್ಸವ ಪ್ರಯುಕ್ತ ವಿಶೇಷ ಆಚರಣೆ ನಡೆಯಿತು. ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಅನ್ನದಾನ ನಡೆಯಿತು. ಉತ್ಸವಕ್ಕಾಗಿ ಟಿ. ಶೆಟ್ಟಿಗೇರಿ, ಶ್ರೀಮಂಗಲದಿಂದ ವಿಶೇಷ ಖಾಸಗಿ ಬಸ್ ಸಂಚಾರ ಏರ್ಪಡಿಸಲಾಗಿತ್ತು. ಕುಟ್ಟ ವೃತ್ತ ನಿರೀಕ್ಷಕ ರಾಜು ಮತ್ತು ಶ್ರೀಮಂಗಲ ಠಾಣಾಧಿಕಾರಿ ಅಯ್ಯನ ಗೌಡ ನೇತೃತ್ವ ದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.