ವೀರಾಜಪೇಟೆ, ಡಿ. 15: ವೀರಾಜಪೇಟೆ ಬಳಿಯ ಕುಂಜಿಲ ಗ್ರಾಮದ ಮಹಾವಿಷ್ಣು ದೇವಾಲಯದಲ್ಲಿ ಕಾಣಿಕೆ ಹುಂಡಿಯನ್ನು ಕಳವು ಮಾಡಿ ತಲೆ ಮರೆಸಿಕೊಂಡಿದ್ದ ಅದೇ ಗ್ರಾಮದ ಎಚ್.ಎನ್ ಸುರೇಶ್ ಎಂಬಾತನನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ಬಂಧಿಸಿ ಇಲ್ಲಿನ ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಮೇರೆ ಆತನನ್ನು 15ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡು ವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ದೇವಾಲಯದ ಕಾಣಿಕೆ ಹುಂಡಿಯನ್ನು ತಾ.12ರಂದು ರಾತ್ರಿ ಯಾರೋ ಕಳವು ಮಾಡಿರುವದಾಗಿ ಆಡಳಿತ ಮಂಡಳಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಸಂಶಯದ ಮೇರೆ ಸುರೇಶ್ನನ್ನು ವಿಚಾರಣೆ ಗೊಳಪಡಿಸಿದ್ದರು.