ಸೋಮವಾರಪೇಟೆ, ಡಿ. 15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ವಲಯ ವ್ಯಾಪ್ತಿಯ ನೂತನ ಸಂಘಗಳಿಗೆ ರೂ. 1.05 ಲಕ್ಷ ಪ್ರಗತಿ ನಿಧಿಯನ್ನು ವಿತರಿಸಲಾಯಿತು.

ಸಂಘದ ಸದಸ್ಯರಿಗೆ ಹೈನುಗಾರಿಕೆ, ಕೃಷಿ ಅಭಿವೃದ್ಧಿ ಸೇರಿದಂತೆ ಮಕ್ಕಳ ಶೈಕ್ಷಣಿಕ ಉದ್ದೇಶಗಳಿಗೆ ಯೋಜನೆಯಿಂದ ಪ್ರಗತಿ ನಿಧಿ ಒದಗಿಸಲಾಯಿತು. ಈ ಸಂದರ್ಭ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿ ತಾರಾ ಲಕ್ಷ್ಮೀ, ನಗದು ಸಹಾಯಕ ಅಭಿಷೇಕ್ ಅವರುಗಳು ಉಪಸ್ಥಿತರಿದ್ದರು.